Publish Date: Sun, 28 Apr 2019 (09:21 IST)
Updated Date: Sun, 28 Apr 2019 (09:24 IST)
ಬೆಂಗಳೂರು: ಏನೇ ಟೀಕೆ ಟಿಪ್ಪಣಿಗಳಿದ್ದರೂ ಚುನಾವಣೆ ಮುಗಿಯುವವರೆಗೆ ಮಾತ್ರ ಎನ್ನುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಚುನಾವಣೆ ಬಳಿಕವೂ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಸುಮಲತಾ ಅಂಬರೀಶ್ ಪರವಾಗಿ ಮಂಡ್ಯದಲ್ಲಿ ಪ್ರಚಾರ ಮಾಡುವಾಗ ದರ್ಶನ್ ಸಿಎಂ ಕುಮಾರಸ್ವಾಮಿಗೆ ಹಲವು ಬಾರಿ ಟಾಂಗ್ ಕೊಟ್ಟಿದ್ದರು. ಆದರೆ ಇದೀಗ ನಿನ್ನೆ ಬೆಂಗಳೂರಿನ ಕಾಲೇಜೊಂದಕ್ಕೆ ಅತಿಥಿಯಾಗಿ ಹೋಗಿದ್ದ ವೇಳೆ ಮಾತನಾಡುವಾಗ ಟಾಂಗ್ ನೀಡಿದ್ದಾರೆ.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ದರ್ಶನ್ ನಾನಂತೂ ಕಾಲೇಜಿಗೆ ಹೋಗಿಲ್ಲ. ನೀವಾದ್ರೂ ಹೋಗಿ ಚೆನ್ನಾಗಿ ಓದಿ ಎಂದು ಕಿವಿ ಮಾತು ಹೇಳಿದರು. ಬಳಿಕ ‘ಸರ್ಕಾರ ರೈತರ ಸಾಲಮನ್ನಾ ಮಾಡ್ತೀವಿ ಅಂತಿದ್ದಾರೆ. ಸಾಲ ಮನ್ನಾ ಮಾಡುವ ಬದಲು ರೈತರ ಬೆಳೆಗಳಿಗೆ ನ್ಯಾಯವಾದ ಬೆಲೆ ಕೊಟ್ಟರೆ ಅವರೇ ಸಾಲ ತೀರಿಸುತ್ತಾರೆ’ ಎಂದಿದ್ದಾರೆ.
ಈ ಸಂದರ್ಭದಲ್ಲಿ ದರ್ಶನ್ ಗೆ ವಿದ್ಯಾರ್ಥಿಗಳು ಪ್ರೀತಿಯಿಂದ ಬೆಳ್ಳಿ ಗದೆ ನೀಡಲು ಮುಂದಾಗ ಅವರೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಲು ನಿರಾಕರಿಸಿ ಈ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿ ಎಂದು ಸಲಹೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ