Publish Date: Thu, 01 Oct 2020 (09:06 IST)
Updated Date: Thu, 01 Oct 2020 (09:07 IST)
ಬೆಂಗಳೂರು : ಸುಂದರವಾದ ಬಾಲಿವುಡ್ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. ಅವರ ಸೌಂದರ್ಯಕ್ಕೆ ಹಲವು ಅಭಿಮಾನಿಗಳು ಮಾರುಹೋಗಿದ್ದಾರೆ. ಕರೀನಾ ಕಪೂರ್ ಅವರು ತ್ವಚೆಯ ಆರೈಕೆಗೆ ಏನು ಮಾಡುತ್ತಾರೆ ಎಂಬುದು ಇಲ್ಲಿದೆ ನೋಡಿ.
ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ತಮ್ಮ ಸೌಂದರ್ಯದ ರಹಸ್ಯ ಬಿಚ್ಚಿಟ್ಟಿದ್ದಾರೆ. ಅದರಂತೆ ಅವರು ಮುಖಕ್ಕೆ ಬಳಸುವ ಫೇಸ್ ಪ್ಯಾಕ್ ಗೆ 2 ಚಮಚ ಶ್ರೀಗಂಧದ ಪುಡಿ, 2 ಹನಿ ವಿಟಮಿನ್ ಇ ಆಯಿಲ್, 1 ಚಿಟಿಕೆ ಅರಶಿನ ಇವಿಷ್ಟನ್ನು ಹಾಲಿನೊಂದಿಗೆ ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿಕೊಳ್ಳುತ್ತಾರಂತೆ. ಇದರಿಂದ ಸ್ಕೀನ್ ಕ್ಲೀನ್, ಸಾಫ್ಟ್ ಮತ್ತು ಗ್ಲೋಯಿಂಗ್ ಆಗುತ್ತದೆ ಎಂದು ತಿಳಿಸಿದ್ದಾರೆ.