ಬೆಂಗಳೂರು: ಕಾಂತಾರ ಚಾಪ್ಟರ್ 1 ಭಾನುವಾರವಾದ ಇಂದು ದಾಖಲೆಯ ಗಳಿಕೆ ಮಾಡುವುದು ಖಚಿತವಾಗಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ.
ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭಾರೀ ಗಳಿಕೆ ಮಾಡುತ್ತಿದೆ. ಮೊದಲ ದಿನವೇ 65 ಕೋಟಿ ಗಳಿಕೆ ಮಾಡಿದ್ದ ಸಿನಿಮಾ ಇದೀಗ 200 ಕೋಟಿ ರೂ. ಗಳಿಕೆಯ ಹಾದಿಯಲ್ಲಿದೆ.
ಇಂದು ಭಾನುವಾರವಾಗಿದ್ದು, ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಇಂದು ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಕಳೆದ ಮೂರು ದಿನಕ್ಕೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಅತ್ಯಧಿಕ ಶೋ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ಕ್ರಮವಾಗಿ 1022, 1052 ಪ್ರದರ್ಶನ ಕಂಡಿತ್ತು. ಇಂದು ಬರೋಬ್ಬರಿ 1178 ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಕೆಜಿಎಫ್ ದಾಖಲೆಯನ್ನೂ ಉಡೀಸ್ ಮಾಡಿದೆ. ಎಲ್ಲಾ ಶೋಗಳೂ ಹೌಸ್ ಫುಲ್ ಆಗಿರುವುದನ್ನು ಗಮನಿಸಿದರೆ ಇಂದು ಬಂಪರ್ ಗಳಿಕೆ ಮಾಡುವುದು ಖಚಿತವಾಗಿದೆ.