ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಮೂರು ದಿನಗಳಲ್ಲ ಎಷ್ಟು ಕಲೆಕ್ಷನ್ ಮಾಡಿದೆ, ವೀಕೆಂಡ್ ನಲ್ಲಿ ಕಲೆಕ್ಷನ್ ಹೆಚ್ಚಾಗಿದೆಯಾ ಎಂಬ ಅನುಮಾನಗಳಿಗೆ ಇಲ್ಲಿದೆ ಉತ್ತರ.
ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆಯಾಗಿತ್ತು. ಇದಿಗ ಮೂರು ದಿನದಲ್ಲಿ ಸಿನಿಮಾದ ಗಳಿಕೆ ಒಟ್ಟು 160 ಕೋಟಿ ರೂ. ದಾಟಿದೆ ಎಂಬ ಮಾಹಿತಿಯಿದೆ.
ಮೊದಲ ದಿನವೇ ಸಿನಿಮಾ 60 ಕೋಟಿ ರೂ.ಗೂ ಅಧಿಕ ಬಾಚಿಕೊಂಡಿತ್ತು. ಮೊದಲ ದಿನ ಕನ್ನಡ ಒಂದರಲ್ಲೇ 25 ಕೋಟಿ ರೂ. ಗಳಿಕೆ ಮಾಡಿತ್ತು. ಎರಡನೇ ದಿನಕ್ಕೆ ಚಿತ್ರದ ಗಳಿಕೆ 40 ಕೋಟಿ ರೂ. ಆಸುಪಾಸಿನಲ್ಲಿತ್ತು. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನಕ್ಕೆ ಕೊಂಚ ಕಡಿಮೆಯಾಗಿತ್ತು.
ಆದರೆ ವೀಕೆಂಡ್ ನಲ್ಲಿ ಮತ್ತೆ ಏರುಗತಿಯಲ್ಲಿದೆ. ನಿನ್ನೆ ಶನಿವಾರದಂದು ಚಿತ್ರದ ಗಳಿಕೆ 50 ಕೋಟಿ ರೂ. ದಾಟಿದೆ. ಇಂದು ಭಾನುವಾರವಾಗಿದ್ದು ಬಹುತೇಕ ಚಿತ್ರಮಂದಿರಗಳು ಫುಲ್ ಆಗಿವೆ. ಇಂದೂ ಕೂಡಾ ಚಿತ್ರದ ಗಳಿಕೆ 50 ಕೋಟಿ ದಾಟುವ ನಿರೀಕ್ಷೆಯಿದೆ. ಕೇವಲ ನಾಲ್ಕು ದಿನಗಳಲ್ಲಿ ಸಿನಿಮಾ 200 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ.