Select Your Language

Notifications

webdunia
webdunia
webdunia
webdunia

ಮಹದಾಯಿ ಹೋರಾಟಗಾರರಿಗೆ ಸಾಥ್ ನೀಡಲಿರುವ ಕನ್ನಡ ಚಿತ್ರರಂಗ

ಮಹದಾಯಿ ಹೋರಾಟಗಾರರಿಗೆ ಸಾಥ್ ನೀಡಲಿರುವ ಕನ್ನಡ ಚಿತ್ರರಂಗ
ಬೆಂಗಳೂರು , ಮಂಗಳವಾರ, 26 ಡಿಸೆಂಬರ್ 2017 (12:50 IST)
ಬೆಂಗಳೂರು: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟಗಾರರ ಬೆಂಬಲಕ್ಕೆ ಕನ್ನಡ ಚಿತ್ರರಂಗ ಸಾಥ್ ನೀಡುವುದಾಗಿ ಸಾ.ರ. ಗೋವಿಂದ ಅವರು ಭರವಸೆ ನೀಡಿದ್ದಾರೆ.


ಚಲನಚಿತ್ರರಂಗದ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರ. ಗೋವಿಂದ ಅವರು ನಟ ಅಂಬರೀಶ್  ಅವರ ಜೊತೆ ಮಾತುಕತೆ ನಡೆಸಿ ಮಹದಾಯಿ ಹೋರಾಟಗಾರರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ. ಹಾಗೆ ಹುಬ್ಬಳ್ಳಿಯಲ್ಲಿ ನಡೆದ ಮಹದಾಯಿ ಹೋರಾಟದಲ್ಲಿ ಕನ್ನಡ ಚಿತ್ರರಂಗ ಪಾಲ್ಗೊಂಡಿದ್ದು, ಅದೇ ರೀತಿ ಇಂದು ಕೂಡ ರೈತರಿಗೆ ಸಾಥ್ ನೀಡುವುದಾಗಿ ಹೇಳಿದ್ದಾರೆ.


ಇಂದು ಮಧ್ಯಾಹ್ನ ಮೂರು ಗಂಟೆಗೆ  ಚಿತ್ರರಂಗದವರೆಲ್ಲ ಬಂದು ಹೋರಾಟದಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿಯವರನ್ನು ಪ್ರಸ್ನಿಸುವುದಾಗಿ ಹೇಳಿದ್ದಾರೆ. ಹಾಗೆ ಈ ವಿಚಾರದಲ್ಲಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶ ಮಾಡಬೇಕು. ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಎಂದು ಸಾ.ರ. ಗೋವಿಂದ ಅವರು ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಲ್ಪಾ ಶೆಟ್ಟಿ ಕ್ಷಮೆ ಕೇಳಿದ್ದು ಯಾವ ತಪ್ಪಿಗಾಗಿ ಗೊತ್ತಾ...?