ಶಿಲ್ಪಾ ಶೆಟ್ಟಿ ಕ್ಷಮೆ ಕೇಳಿದ್ದು ಯಾವ ತಪ್ಪಿಗಾಗಿ ಗೊತ್ತಾ...?

ಮಂಗಳವಾರ, 26 ಡಿಸೆಂಬರ್ 2017 (11:20 IST)
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯವರು ಮಾಧ್ಯಮವೊಂದರಲ್ಲಿ ಸಂದರ್ಶನದ ವೇಳೆ ಜಾತಿ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಕ್ಕಾಗಿ  ಆರೋಪಕ್ಕೆ ಗುರಿಯಾಗಿದ್ದು, ಈಗ  ಅವರು ಟ್ವಿಟರ್ ನಲ್ಲಿ ಇದಕ್ಕೆ ಕ್ಷಮೆ ಕೋರಿದ್ದಾರೆ.


 ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹೇಳಿಕೆಯಲ್ಲಿ ಯಾರದೇ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶ ಹೊಂದಿರಲಿಲ್ಲ. ವಿವಿಧ ಜಾತಿ ಮತ್ತು ನಂಬಿಕೆ ಇರುವ ದೇಶದಲ್ಲಿ ಇರುವುದಕ್ಕೆ ಹೆಮ್ಮೆ ಪಡುವ ನಾನು, ಎಲ್ಲರ ಭಾವನೆಯನ್ನು ಗೌರವಿಸುತ್ತೇನೆ ‘ ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಗ್ ಬಾಸ್ ಕನ್ನಡ: ಈ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ!