Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಕನ್ನಡ ಸಿನಿಮಾಗಳು

ಸದ್ಯದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಕನ್ನಡ ಸಿನಿಮಾಗಳು
ಬೆಂಗಳೂರು , ಸೋಮವಾರ, 28 ನವೆಂಬರ್ 2022 (08:30 IST)
ಬೆಂಗಳೂರು: ಥಿಯೇಟರ್ ನಂತೇ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸುವ ಪ್ರತ್ಯೇಕ ವರ್ಗವಿದೆ. ಒಟಿಟಿ ಪ್ರೇಕ್ಷಕರಿಗೆ ಸದ್ಯದಲ್ಲೇ ಹಲವು ಸಿನಿಮಾಗಳು ರಸದೌತಣ ನೀಡಲಿವೆ.

ಇತ್ತೀಚೆಗೆ ಬಿಡುಗಡೆಯಾದ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್, ಸಿನಿಮಾ ಸನ್ ನೆಕ್ಸ್ಟ್ ಆಪ್ ನಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿವೆ. ದಿಲ್ ಪಸಂದ್ ಫೆಬ್ರವರಿಯಲ್ಲಿ, ಲವ್ 360 ಇದೇ ತಿಂಗಳು ಪ್ರಸಾರವಾಗಲಿದೆ.

ಡಾಲಿ ಧನಂಜಯ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿರುವ ಮಾನ್ಸೂನ್ ರಾಗ, ಹೆಡ್ ಬುಷ್, ನವರಸನಾಯಕ ಜಗ್ಗೇಶ್ ನಾಯಕರಾಗಿರುವ ತೋತಾಪುರಿ ಜೀ5 ಆಪ್ ನಲ್ಲಿ ಪ್ರಸಾರವಾಗಲಿದೆ. ಈ ಮೂರು ಸಿನಿಮಾಗಳು ನವಂಬರ್ ಕೊನೆಯ ವಾರ ಮತ್ತು ಡಿಸೆಂಬರ್ ಆದಿಯಲ್ಲಿ ಪ್ರಸಾರವಾಗುವುದು.

ಇದರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಸಾಕ್ಷ್ಯಚಿತ್ರ ಈ ತಿಂಗಳ ಅಂತ್ಯಕ್ಕೆ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರಿಪ್ರಿಯಾ ಜೊತೆ ಸಪ್ತಪದಿ ತುಳಿಯಲಿದ್ದಾರೆ ನಟ ವಸಿಷ್ಟ ಸಿಂಹ?!