ಬೆಂಗಳೂರು: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಇಂದು ಭರ್ಜರಿ ರಿಲೀಸ್ ಆಗಿದೆ.
ಕನ್ನಡದಲ್ಲೂ ಈ ಸಿನಿಮಾ ಬಿಡುಗಡೆಯಾಗಿದೆ. ಆದರೆ ಕನ್ನಡದಲ್ಲಿ ಕೇವಲ 8 ಥಿಯೇಟರ್ ಗಳಲ್ಲಿ ನಾಮಕಾವಸ್ಥೆಗೆ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದಲ್ಲೂ ಹೆಚ್ಚು ತೆಲುಗು ಶೋ ಬಿಡಲಾಗಿದೆ. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ತೆಲುಗಿನಲ್ಲಿ 800 ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿರುವ ಪುಷ್ಟ ಕನ್ನಡದಲ್ಲಿ ಕೇವಲ 8 ಶೋ ಕಾಣುತ್ತಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ.