Publish Date: Tue, 22 Aug 2017 (19:26 IST)
Updated Date: Tue, 22 Aug 2017 (19:37 IST)
ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾಗಿರುವ ನಟಿ, ಮಾಜಿ ಸಂಸದೆ ರಮ್ಯಾ ಆಗಾಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಟೀಕಾಸ್ತ್ರ ಪ್ರಯೋಗಿಸುತ್ತಾ ಅದಕ್ಕೆ ಪ್ರತಿಯಾಗಿ ಟೀಕೆಗಳನ್ನ ಎದುರಿಸಿದ್ದಿದೆ. ಈ ಬಾರಿಯೂ ಮೋದಿಯನ್ನ ಟೀಕಿಸುವ ಭರದಲ್ಲಿ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ಅಸ್ಸಾಂ, ಗುಜರಾತ್ ಅಥವಾ ಬಿಹಾರ ನೆರೆ ಸಂತ್ರಸ್ತ ಜೊತೆ ಪ್ರಧಾನಮಂತ್ರಿ ನರೇಂದ್ರಮೋದಿ ಇರುವ ಫೋಟೋ ತೋರಿಸಿದರೆ 25000 ರೂ. ಬಹುಮಾನ ನೀಡುತ್ತೇನೆ. ಪೋಟೋಸಾಫ್ ಫೋಟೋ ಬಿಟ್ಟು ಎಂದು ಫೇಸ್ಬುಕ್ ಮತ್ತು ಟ್ವಿಟ್ಟರ್`ನಲ್ಲಿ ಪೋಸ್ಟ್ ಹಾಕಿದ್ದರು.
ರಮ್ಯಾ ಅವರ ಈ ಪೋಸ್ಟ್`ಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬ ನಟಿ ರಮ್ಯಾ ಸಮುದ್ರ ತೀರದಲ್ಲಿ ನಿಂತಿರುವ ಹಾಟ್ ಫೋಟೋ ಹಾಕಿ, ಇದು ರಮ್ಯಾ ಪ್ರವಾಸ ಸಂತ್ರಸ್ತರ ಜೊತೆ ಇರುವ ಫೋಟೋ. ಇದಕ್ಕೆ 6 ಲಕ್ಷ ಬಹುಮಾನ ನೀಡಲಾಗಿದೆ ಎಂದು ವ್ಯಂಗ್ಯ ಪೋಸ್ಟ್ ಮಾಡಿದ್ದಾರೆ.
ಮತ್ತೊಬ್ಬ ವ್ಯಕ್ತಿ ರಮ್ಯಾ ಅವರು ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಅಪರೂಪದ ಚಿತ್ರಗಳು ಎಂದು ಪೋಸ್ಟ್ ಮಾಡಿದ್ಧಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ