Publish Date: Sat, 29 Aug 2026 (10:20 IST)
Updated Date: Sat, 29 Aug 2026 (10:23 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಂದಗೋಕುಲ ಧಾರವಾಹಿಯ ಕೇಶವ ಪಾತ್ರ ಮಾಡುತ್ತಿದ್ದ ಯಶ್ವಂತ್ ಕುಮಾರ್ ಪಾತ್ರದಿಂದ ಹೊರನಡೆದಿದ್ದಾರೆ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಅವರು ಈ ನಿರ್ಧಾರಕ್ಕೆ ಬರಲು ಕಾರಣವಿದೆ.
ತುಂಬು ಕುಟುಂಬದ ಒಗ್ಗಟ್ಟಿನ ಕತೆ ಸಾರುವ ನಂದಗೋಕುಲ ಧಾರವಾಹಿ ಜನಪ್ರಿಯವಾಗಿದೆ. ಧಾರವಾಹಿಯ ಎಲ್ಲಾ ಪಾತ್ರಕ್ಕೂ ಅವರದ್ದೇ ಆದ ಅಭಿಮಾನಿಗಳಿದ್ದಾರೆ. ಅದರಲ್ಲೂ ಕೇಶವ-ಮೀನಾ ಜೋಡಿಗೆ ವಿಶೇಷ ಫಾಲೋವರ್ಸ್ ಇದ್ದಾರೆ.
ಆದರೆ ಈಗ ಜನಪ್ರಿಯತೆಯಲ್ಲಿರುವಾಗಲೇ ಕೇಶವ ಪಾತ್ರ ಮಾಡುತ್ತಿದ್ದ ಯಶ್ವಂತ್ ಪಾತ್ರದಿಂದ ಹೊರನಡೆದಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ನಂದಗೋಕುಲದಿಂದ ಹೊರಬರುವ ನಿರ್ಧಾರ ಸುಲಭವಾಗಿರಲಿಲ್ಲ. ಆದರೆ ಒಂದು ಅಂತ್ಯ ಎಂದರೆ ಇನ್ನೊಂದರ ಆರಂಭ. ಹೊಸ ಅಧ್ಯಾಯಕ್ಕೆ ಹೆಜ್ಜೆ ಹಾಕುತ್ತಿದ್ದಾನೆ. ನನ್ನ ಈ ಹೊಸ ಪಯಣ ಮುಂಬರುವ ಚಿತ್ರ ಸಮುದ್ರ ಮಂಥನದಿಂದ ಆರಂಭವಾಗಲಿದೆ. ನಿಮ್ಮೆಲ್ಲರ ಬೆಂಬಲಿರಲಿ ಎಂದು ಸುದೀರ್ಘ ಸಂದೇಶ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಅವರು ಸಿನಿಮಾ ಕಡೆಗೆ ಗಮನ ನೀಡಲು ಧಾರವಾಹಿ ಬಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಕೇಶವ ಪಾತ್ರದಿಂದ ಅವರು ಹೊರನಡೆಯುತ್ತಿದ್ದಾರೆ ಎನ್ನುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ