Publish Date: Sat, 29 Aug 2026 (09:15 IST)
Updated Date: Sat, 29 Aug 2026 (09:17 IST)
ಬೆಂಗಳೂರು: ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಮೂರನೇ ದಿನ ಎಷ್ಟು ಗಳಿಕೆ ಮಾಡಿದೆ ಇಲ್ಲಿದೆ ವಿವರ.
ಯಶ್ ಸಿನಿಮಾ ಮೊದಲ ದಿನವೇ 150 ಕೋಟಿ ರೂ. ಗಳಿಕೆ ಮಾಡಿ ಸಾಕಷ್ಟು ದಾಖಲೆಗಳನ್ನು ಧೂಳೀಪಟ ಮಾಡಿತ್ತು. ಎರಡನೇ ದಿನಕ್ಕೆ ನೆಗೆಟಿವ್ ರಿವ್ಯೂಗಳ ಕಾಟದಿಂದಾಗಿ ಸಿನಿಮಾ ಗಳಿಕೆ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿತ್ತು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಿನಿಮಾಗಳ ಪ್ರಮುಖ ದೃಶ್ಯಗಳ ತುಣುಕುಗಳೂ ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರುತ್ತಿದೆ.
ಹಾಗಿದ್ದರೂ ಸಿನಿಮಾ ಮೂರನೇ ದಿನಕ್ಕೆ 200 ಕೋಟಿ ರೂ. ಕ್ಲಬ್ ಸೇರಿಕೊಂಡಿದೆ. ನಿನ್ನೆ ದಿನ ಸಿನಿಮಾ 26.60 ಕೋಟಿ ರೂ. ಗಳಿಕೆ ಮಾಡಿದೆ. ಹಿಂದಿಯಲ್ಲಿ ಗರಿಷ್ಠ ಗಳಿಕೆ ಮಾಡುತ್ತಿರುವುದು ವಿಶೇಷ. ನಿನ್ನೆ ಹಿಂದಿ ಅವತರಣಿಕೆ 19.15 ಕೋಟಿ ರೂ. ಗಳಿಕೆ ಮಾಡಿತ್ತು. ಕನ್ನಡದಲ್ಲಿ 5 ಕೋಟಿ ರೂ, ತೆಲುಗಿನಲ್ಲಿ 1.50 ಕೋಟಿ ರೂ., ತಮಿಳಿನಲ್ಲಿ 75 ಲಕ್ಷ, ಮಲಯಾಳಂನಲ್ಲಿ 20 ಲಕ್ಷ ರೂ. ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಮಾತ್ರ ಇದುವರೆಗೆ 197.70 ಕೋಟಿ ರೂ., ವಿಶ್ವದಾದ್ಯಂತ ಒಟ್ಟಾರೆ 221.45 ಕೋಟಿ ರೂ. ಗಳಿಕೆ ಮಾಡಿದೆ.
ಟಾಕ್ಸಿಕ್ ಗೆ ಇಂದು ಮತ್ತು ನಾಳೆ ಮಹತ್ವದ ದಿನವಾಗಿದೆ. ವೀಕೆಂಡ್ ನಲ್ಲಿ ರಜೆಯಿರುವುದರಿಂದ ಥಿಯೇಟರ್ ಗೆ ಬರುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ದಿನ ಗಳಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ