ಬೆಂಗಳೂರು: 2014ರಲ್ಲಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ನಟ ಅಜಯ್ ರಾವ್ ಹಾಗೂ ಸಪ್ನಾ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಸಪ್ನಾ ಅವರು ಅಜಯ್ ವಿರುದ್ದ ಕೌಟುಂಬಿಕ ಕಲಹ ಎಂದು ದೂರು ನೀಡಿದ್ದಾರೆ.
ಇದೀಗ ಈ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಗಾಂಧಿನಗರದಲ್ಲಿ ಕೇಳಿವರುತ್ತಿದೆ. ವಿಚ್ಛೇಧನ ಕೋರಿ ಸಪ್ನಾ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಳೆದ ವರ್ಷವಷ್ಟೇ ತಮ್ಮ ನೂತನ ಮನೆಯ ಅದ್ಧೂರಿ ಗೃಹಪ್ರವೇಶ ನಡೆಸಿದ ದಂಪತಿ ಬಾಳಲ್ಲಿ ಇದಿಗ ಎಲ್ಲವೂ ಸರಿಯಿಲ್ಲ ಎನ್ನಲಾಗಿದೆ. ಸಪ್ನಾ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಸಪ್ನಾ ಅನ್‌ಫಾಲೋ ಮಾಡಿದ್ದಾರೆ, ಆದರೆ ಸಪ್ನಾ ಅವರು ಅಜಯ್‌ರನ್ನು ಫಾಲೋ ಮಾಡುತ್ತಿದ್ದಾರೆ. ದಂಪತಿಗಳಿಬ್ಬರು ತಮ್ಮ ಮಗಳ ಅಕೌಂಟ್ ಅನ್ನು ಫಾಲೋ ಮಾಡುತ್ತಿದ್ದಾರೆ.