Select Your Language

Notifications

webdunia
webdunia
webdunia
webdunia

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ಅಂದುಕೊಂಡಂತೆ ಯಾವುದೂ ಇಲ್ಲ

Darshan

Krishnaveni K

ಬೆಂಗಳೂರು , ಶನಿವಾರ, 16 ಆಗಸ್ಟ್ 2025 (13:29 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ರದ್ದಾಗಿರುವ ಹಿನ್ನಲೆಯಲ್ಲಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ಈಗ ಎಲ್ಲವೂ ಮೊದಲಿನಂತಿಲ್ಲ.

ನಟ ದರ್ಶನ್ ಆಂಡ್ ಗ್ಯಾಂಗ್ ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಅವರಿಗೆ ರಾಜಾತಿಥ್ಯ ನೀಡಿದ್ದು ಸುಪ್ರೀಂಕೋರ್ಟ್ ಗಮನಕ್ಕೂ ಬಂದಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಅಂತಹ ಯಾವುದೇ ವಿಐಪಿ ಟ್ರೀಟ್ಮೆಂಟ್ ಕೊಡಬಾರದು ಎಂದು ಖಡಕ್ ಸೂಚನೆ ನೀಡಿತ್ತು.

ಹೀಗಾಗಿ ಕಾರಾಗೃಹ ಎಡಿಜಿಪಿ ಬಿ ದಯಾನಂದ್ ಸಭೆ ನಡೆಸಿ ಯಾವುದೇ ವಿಶೇಷ ಸವಲತ್ತು ನೀಡದಂತೆ ಎಚ್ಚರಿಕೆ ನೀಡಿದ್ದರು. ಆದ್ದರಿಂದ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ಸಾಮಾನ್ಯ ಕೈದಿಗಳಂತೇ ನೋಡಿಕೊಳ್ಳಲಾಗುತ್ತಿದೆ. ಇದರಿಂದ ದರ್ಶನ್ ಚಡಪಡಿಸುತ್ತಿದ್ದಾರೆ.

ಐಷಾರಾಮಿ ಜಿವನಕ್ಕೆ ಒಗ್ಗಿ ಹೋಗಿರುವ ದರ್ಶನ್ ಗೆ ಈಗ ಬೆನ್ನು ನೋವು ಕಾಡುತ್ತಿದೆಯಂತೆ. ರಾತ್ರಿ ನಿದ್ರೆಯಿಲ್ಲದೇ ಚಡಪಡಿಸುತ್ತಿದ್ದಾರೆ. ಇತರೆ ಕೈದಿಗಳ ಸ್ಥಿತಿಯೂ ಹೆಚ್ಚು ಕಡಿಮೆ ಇದೇ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೂಲಿ, ವಾರ್ 2 ಮುಂದೆಯೂ ಬಗ್ಗದ ಸು ಫ್ರಮ್ ಸೋ