Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯ ದಿನ ಜೈಲಲ್ಲಿ ಪ್ರಜ್ವಲ್ ರೇವಣ್ಣ, ದರ್ಶನ್ ಏನ್ಮಾಡಿದ್ರು ಗೊತ್ತಾ

Darshan-Prajwal Revanna

Krishnaveni K

ಬೆಂಗಳೂರು , ಶುಕ್ರವಾರ, 15 ಆಗಸ್ಟ್ 2025 (12:39 IST)
ಬೆಂಗಳೂರು: ಇಂದು 79 ನೇ ಸ್ವಾತಂತ್ರ್ಯ ದಿನವಾಗಿದ್ದು ಜೈಲು ಹಕ್ಕಿಗಳಾಗಿರುವ ಪ್ರಜ್ವಲ್ ರೇವಣ್ಣ ಮತ್ತು ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನು ಮಾಡಿದ್ರು ಗೊತ್ತಾ?

ಪ್ರಜ್ವಲ್ ರೇವಣ್ಣ ಮನೆಗೆಲಸದಾಕೆಯ ಮೇಲೆ ರೇಪ್ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದಾರೆ. ಈ ಸಂಬಂಧ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನು ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ವಿಚಾರಣಾಧೀನ ಕೈದಿಯಾಗಿದ್ದಾರೆ.

ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲೂ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ. ಕಳೆದ ವರ್ಷವೂ ಸ್ವಾತಂತ್ರ್ಯೋತ್ಸವ ದಿನ ಇವರೆಲ್ಲರೂ ಇದೇ ಜೈಲಿನಲ್ಲಿದ್ದರು. ಆದರೆ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಇಬ್ಬರೂ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ.

ಪ್ರತೀ ವರ್ಷದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ಇದಕ್ಕೆ ವಿಚಾರಣಾಧೀನ ಕೈದಿಗಳು, ಅಪರಾಧಿಗಳು ಎಲ್ಲರೂ ಭಾಗಿಯಾಗುತ್ತಾರೆ. ಆದರೆ ಪ್ರಜ್ವಲ್ ಮತ್ತು ದರ್ಶನ್ ಇಬ್ಬರೂ ಬಂದಿಲ್ಲ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಿಷನ್ ಸುದರ್ಶನ್ ಘೋಷಿಸಿದ ಪ್ರಧಾನಿ ಮೋದಿ: ಹೀಗಂದರೆ ಏನು ಇಲ್ಲಿದೆ ವಿವರ