Select Your Language

Notifications

webdunia
webdunia
webdunia
webdunia

‌ಸಲ್ಮಾನ್‌ ಖಾನ್‌ ಸೋದರಿಯ ಈದ್‌ ಪಾರ್ಟಿಯಲ್ಲಿ ಕಂಗನಾ: ಅಭಿಮಾನಿಗಳಿಗೆ ಶಾಕ್!

kangana ranuth ed party salman khan ಸಲ್ಮಾನ್‌ ಖಾನ್‌ ಕಂಗನಾ ರಾಣವತ್‌ ಈದ್‌ ಪಾರ್ಟಿ
benagaluru , ಬುಧವಾರ, 4 ಮೇ 2022 (16:24 IST)
ಬಾಲಿವುಡ್‌ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮತ್ತು ಅವರ ಪತಿ ಆಯುಷ್ ಶರ್ಮಾ ಮಂಗಳವಾರ ಆಯೋಜಿಸಿದ್ದ ಈದ್ ಪಾರ್ಟಿಯಲ್ಲಿ ನಟಿ ಕಂಗನಾ ರಾಣಾವತ್ ಭಾಗವಹಿಸುವ ಮೂಲಕ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.
ಒಂದಲ್ಲಾ ಒಂದು ಹೇಳಿಕೆ ನೀಡುತ್ತಾ ವಿವಾದದ ಬಿರುಗಾಳಿ ಎಬ್ಬಿಸುವ ಮೂಲಕ ಟೀಕೆಗೆ ಗುರಿಯಾಗುತ್ತಿರುವ ಕಂಗನಾ ರಾಣಾವತ್‌, ಮಂಗಳವಾರ ಆಯೋಜಿಸಿದ್ದ ಈದ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ.
ಈದ್‌ ಕಾರ್ಯಕ್ರಮದಲ್ಲಿ ಕರಣ್ ಜೋಹರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಸಲ್ಮಾನ್ ಖಾನ್ ಕೂಡ ಪಾಲ್ಗೊಂಡಿದ್ದರು ಎನ್ನಲಾಗಿದೆ. ಕಂಗನಾ ಸದಾ ಟೀಕಿಸುವ ಬಾಲಿವುಡ್‌ ಸ್ಟಾರ್‌ ಗಳ ಜೊತೆ ಕಂಗನಾ ಭಾಗವಹಿಸಿದ್ದು ಅಭಿಮಾನಿಗಳಿಗೆ ಮತ್ತಷ್ಟು ಅಚ್ಚರಿ ಮತ್ತು ಆಘಾತ ತಂದಿದೆ.
ಸಾಂಪ್ರದಾಯಿಕ ಉಡುಗೆ ಬಿಳಿ ಷರಾರಾ ಧರಿಸಿ ತೊಟ್ಟು ಕಂಗನಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಮತ್ತೊಂದು ಅಚ್ಚರಿಯ ವಿಷಯ. ಅರ್ಪಿತಾ ಅವರ ಈದ್ ಪಾರ್ಟಿಗೆ ಕಂಗನಾ ಆಗಮಿಸಿದ ವೀಡಿಯೊವನ್ನು ಪಾಪರಾಜೋ ಹಂಚಿಕೊಂಡಿದ್ದರಿಂದ, ಇನ್‌ ಸ್ಟಾಗ್ರಾಂನಲ್ಲಿ ಅವಳನ್ನು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಆದಾಗ್ಯೂ, ಕಂಗನಾ ಬಾಲಿವುಡ್ ಪಾರ್ಟಿಯಲ್ಲಿ ಭಾಗವಹಿಸಿದ್ದನ್ನು ಗಮನಿಸಿದ ಕೆಲವರು ಟೀಕಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ದಂಪತಿ!