Publish Date: Sun, 02 Jan 2022 (16:29 IST)
Updated Date: Sun, 02 Jan 2022 (16:31 IST)
ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಬಗ್ಗೆ ಕೆಲವು ದಿನಗಳಿಂದ ರೂಮರ್ ಹರಿದಾಡುತ್ತಿತ್ತು. ಆದರೆ ಇದೀಗ ಸ್ವತಃ ಗೌತಮ್ ಸುದ್ದಿಯನ್ನು ಖಚಿತಪಡಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಗೌತಮ್ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಪ್ರೆಗ್ನೆಂಟ್ ಮಹಿಳೆಯ ಇಮೋಜಿ ಜೊತೆಗೆ ಕಾಜಲ್ ಅಗರ್ವಾಲ್ ಫೋಟೋ ಹಾಕಿ 2022 ರನ್ನು ಸಂಭ್ರಮದಿಂದ ಎದಿರು ನೋಡುತ್ತಿದ್ದೇವೆ ಎಂದು ಗೌತಮ್ ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ದಂಪತಿಗೆ ಶುಭಾಶಯಗಳ ಸುರಿಮಳೆಯಾಗಿದೆ. 2020 ರಲ್ಲಿ ಕಾಜಲ್-ಗೌತಮ್ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.