Select Your Language

Notifications

webdunia
webdunia
webdunia
Wednesday, 2 April 2025
webdunia

ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಬ್ಜ ಸಿನಿಮಾ

Kabja is a successful movie
bangalore , ಶನಿವಾರ, 18 ಮಾರ್ಚ್ 2023 (13:58 IST)
ಬಹು ನಿರೀಕ್ಷಿತ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ " ಕಬ್ಜ " ಮಾರ್ಚ್ 17 ರಂದು ಬಿಡುಗಡೆಯಾಗಿ, ಭಾರತದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 
 
"ಕೆ.ಜಿ.ಎಫ್", " ಕಾಂತಾರ " ಚಿತ್ರಗಳ ನಂತರ ದೇಶದಾದ್ಯಂತ "ಕಬ್ಜ" ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದೆ.
ಬಿಡುಗಡೆಯಾದ ಮೊದಲ ದಿನವೇ ಭಾರತಾದ್ಯಂತ 54ಕೋಟಿಗೂ ಹೆಚ್ಚು 'ಬಾಕ್ಸ್ ಆಫೀಸ್" ಕಲೆಕ್ಷನ್ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.  ಮೂಲಗಳ ಪ್ರಕಾರ    ಎರಡನೇ ದಿನವೇ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಆಗಬಹುದೆಂಬ ಮಾತು ಕೇಳಿ ಬರುತ್ತಿದೆ. ಭಾರತದಾಚೆಗೂ "ಕಬ್ಜ" ಸಿನಿಮಾ ಬಿಡುಗಡೆಯಾಗಿದ್ದು, ಅಲ್ಲೂ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.‌ 
ಆರ್ ಚಂದ್ರು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ರಿಯಲ್  ಸ್ಟಾರ್ ಉಪೇಂದ್ರ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರಲಿದೆಯಾ ವಂಚಕ ಸುಕೇಶ್ ಕುರಿತ ಸಿನಿಮಾ?