Publish Date: Sat, 18 Mar 2023 (11:38 IST)
Updated Date: Sat, 18 Mar 2023 (11:42 IST)
ಗಣ್ಯಾತಿಗಣ್ಯರು, ರಾಜಕಾರಣಿಗಳು, ತಾರೆಯರಿಗೆ ನೂರಾರು ಕೋಟಿ ರೂ.ಗಳನ್ನು ವಂಚಿಸಿರುವ ಸುಕೇಶ್ ಚಂದ್ರಶೇಖರ್ ಕುರಿತ ಸಿನಿಮಾ ಬರಲಿದೆಯಾ ಎಂಬ ಮಾತು ಬಲವಾಗಿ ಕೇಳಿ ಬರ್ತಿದೆ.. ಬಾಲಿವುಡ್ ನಿರ್ದೇಶಕ ಆನಂದ್ ಕುಮಾರ್ ಇಂತದ್ದೊಂದು ಲೆಕ್ಕಾಚಾರ ಮಾಡಿದ್ದಾರೆಂದು ಮೂಲಗಳು ಹೇಳಿವೆ. ದೆಹಲಿಯ ತಿಹಾರ್ ಜೈಲಿನ SP ಜೈಲರ್ ದೀಪಕ್ ಶರ್ಮ ಪ್ರತಿಕ್ರಿಯಿಸಿ, ಸುಕೇಶ್ ಚಂದ್ರಶೇಖರ್ ಪ್ರಕರಣದ ಬಗ್ಗೆ ಜನರಲ್ಲಿ ಬಹಳ ಕುತೂಹಲವಿದೆ ಎಂದು ಹೇಳಿದ್ದಾರೆ. ಮದ್ರಾಸ್ ಕೆಫೆ ಸಿನಿಮಾ ನಟಿ ಲೀನಾ ಮಾರಿಯಾ ಪೌಲ್ ಅವರನ್ನು ವಿವಾಹವಾಗಿರುವ ಸುಕೇಶ್, ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ರೊಂದಿಗೂ ಸಂಬಂಧ ಹೊಂದಿದ್ದು ಖಚಿತವಾಗಿದೆ. ಜಾಕ್ವೆಲಿನ್ ಸೇರಿದಂತೆ ಅನೇಕ ನಟಿಯರನ್ನು ಬುಟ್ಟಿಗೆ ಹಾಕಿಕೊಂಡು, ಅವರಿಗೂ ಕೋಟ್ಯಂತರ ರೂಪಾಯಿ ವಂಚನೆಯ ಹಣವನ್ನು ಕೊಡುಗೆಯಾಗಿ ನೀಡಿದ್ದಾನೆ ಎಂಬ ಆರೋಪಗಳಿವೆ. ರ್ಯಾನ್ ಬ್ಯಾಕ್ಸಿ ಎಂಬ ಔಷಧ ಕಂಪನಿಯ ಮಾಜಿ ಮಾಲಿಕ ಶಿವಿಂದರ್ ಸಿಂಗ್ ಪತ್ನಿ ಅದಿತಿ ಸಿಂಗ್ಗೆ 200 ಕೋಟಿ ರೂಪಾಯಿ ವಂಚಿಸಿದ್ದಾರೆ. AIADMKಯ ಶಶಿಕಲಾ ಬಣಕ್ಕೆ ಪಕ್ಷದ ಚಿಹ್ನೆ ಸಿಗುತ್ತದೆ ಎಂದು ಭರವಸೆ ನೀಡಿಯೂ ವಂಚಿಸಿದ್ದಾರೆ. ಅವರಿಂದ ಮೋಸ ಹೋದ ಹಲವಾರು ಮಂದಿ ದೂರು ನೀಡಿದ್ದಾರೆ. ಈತನ ಬದುಕೇ ಸಿನಿಮಾ ಕಥೆಯಂತಿರುವ ಕಾರಣ ಅದನ್ನೇ ಸಿನಿಮಾ ಮಾಡಲು ನಿರ್ದೇಶಕರು ಮುಂದಾಗಿದ್ದಾರಂತೆ