Publish Date: Sat, 18 Mar 2023 (11:34 IST)
Updated Date: Sat, 18 Mar 2023 (11:42 IST)
ಉಪೇಂದ್ರ ಪ್ಯಾನ್ ಇಂಡಿಯಾ ಹೀರೋ ಆಗಿ ಕಮಾಲ್ ಮಾಡ್ತಿರೊ ಬಹು ನಿರೀಕ್ಷಿತ ಸಿನಿಮಾ ಕಬ್ಜ ರಿಲೀಸ್ ಆಗಿದೆ.. ಈಗಾಗಲೇ ಸಿನಿಮಾದ ಟ್ರೇಲರ್ ಸಿಕ್ಕಾಪಟ್ಟೆ ಹಿಟ್ ಆಗಿದೆ. ಕರ್ನಾಟಕದಲ್ಲಿ ನೂರಾರು ತೆರೆಗಳಲ್ಲಿ ಕಬ್ಜ ಮಿಂಚುತ್ತಿದೆ. ಸಿನಿಮಾ ಬಗ್ಗೆ ಬಾಲಿವುಡ್, ಕಾಲಿವುಡ್, ಟಾಲಿವುಡ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗ್ತಿದೆ. ಉಪೇಂದ್ರ ಜೊತೆ ಕಿಚ್ಚ ಸುದೀಪ್, ಡಾ.ಶಿವರಾಜ್ ಕುಮಾರ್ ನಟಿಸಿದ್ದಾರೆ.. ರೆಟ್ರೋ ಅಂಡರ್ ವರ್ಲ್ಡ್ ಕುರಿತ ಕಥಾನಕವಿರೋ ಕಬ್ಜ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ. ವಿಶ್ವದಾದ್ಯಂತ ಸುಮಾರು 4000 ಸ್ಕ್ರೀನ್ಸ್ನಲ್ಲಿ ಕಬ್ಜ ವರ್ಲ್ಡ್ ಅನಾವರಣ ಮಾಡಲಾಗಿದೆ. ಕರ್ನಾಟಕದಲ್ಲಿ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ಕೇಕೆ ಹಾಕ್ತಿದೆ.