ಬೆಂಗಳೂರು: ಲಾಕ್ ಡೌನ್ ಬಳಿಕ ಬಿಡುಗಡೆಯಾದ ಸಿನಿಮಾಗಳಲ್ಲಿ ಒಂದಾಗಿರುವ ಜೀವ್ನಾನೇ ನಾಟ್ಕ ಸಾಮಿ ಸಿನಿಮಾ ಈಗ ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆಯಾಗುತ್ತಿದೆ.
ಆಗಸ್ಟ್ ನಲ್ಲಿ ಈ ಚಿತ್ರ ಥಿಯೇಟರ್ ಬಿಡುಗಡೆಯಾಗಿತ್ತು. ಇದೀಗ ಬುಕ್ ಮೈ ಶೋ ಒಟಿಟಿ ಫ್ಲ್ಯಾಟ್ ಫಾರಂನಲ್ಲಿ ಅಕ್ಟೋಬರ್ 15 ರಿಂದ ವೀಕ್ಷಣೆಗೆ ಲಭ್ಯವಾಗಲಿದೆ. 59 ರೂ. ಪಾವತಿಸಿ ಚಿತ್ರದ ಪ್ರಿ ಬುಕಿಂಗ್ ಮಾಡಬಹುದಾಗಿದೆ.
ಕನ್ನಡತಿ ಧಾರವಾಹಿ ಖ್ಯಾತಿಯ ಕಿರಣ್ ರಾಜ್, ಸರಿಗಮಪ ಖ್ಯಾತಿಯ ಶ್ರೀ ಹರ್ಷ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾದಲ್ಲಿ ರಿಯಾಲಿಟಿ ಶೋಗಳ ನೈಜ ಚಿತ್ರಣ ಕಟ್ಟಿಕೊಡಲಾಗಿತ್ತು. ರಾಜು ಭಂಡಾರಿ ರಾಜಾವರ್ತ ಚಿತ್ರದ ನಿರ್ದೇಶಕರು. ರಿಲೀಸ್ ಗೂ ಮುನ್ನ ಕೆಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದುಕೊಂಡ ಸಿನಿಮಾ ಇದಾಗಿದೆ.