Select Your Language

Notifications

webdunia
webdunia
webdunia
Wednesday, 9 April 2025
webdunia

ಚಿತ್ರರಂಗಕ್ಕೆ ಸಿನಿಪ್ರಿಯರನ್ನು ಸೆಳೆಯಲು ಪ್ರಿ ರಿಲಸ್ ಈವೆಂಟ್ ತಂತ್ರ

ಸ್ಯಾಂಡಲ್ ವುಡ್
ಬೆಂಗಳೂರು , ಶುಕ್ರವಾರ, 8 ಅಕ್ಟೋಬರ್ 2021 (12:07 IST)
ಬೆಂಗಳೂರು: ಥಿಯೇಟರ್ ನಲ್ಲಿ ಹೌಸ್‍ ಫುಲ್ ಪ್ರದರ್ಶನಕ್ಕೆ ಅವಕಾಶ ಕೊಟ್ಟ ಬಳಿಕವೂ ಚಿತ್ರನಿರ್ಮಾಪಕರನ್ನು ಚಿಂತೆಯೊಂದು ಕಾಡುತ್ತಿದೆ. ಕೊರೋನಾ ಭಯ, ಒಟಿಟಿ ಪ್ಲಾಟ್ ಫಾರಂಗಳ ಹಾವಳಿಯಿಂದಾಗಿ ಜನ ಸಿನಿಮಾ ನೋಡಲು ಥಿಯೇಟರ್ ಗೆ ಬರಲು ಹಿಂದೇಟು ಹಾಕುವಂತಾಗಿದೆ.

 

ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣದೇ ಸಿನಿಮಾ ರಂಗಕ್ಕೆ ಆದಾಯ ಬರದು. ಹೀಗಾಗಿ ಮತ್ತೆ ಜನರನ್ನು ಥಿಯೇಟರ್ ನತ್ತ ಸೆಳೆಯಲು ಚಿತ್ರತಂಡಗಳು ಪ್ರಿ ರಿಲೀಸ್ ಈವೆಂಟ್ ಆಯೋಜಿಸುವ ತಂತ್ರಕ್ಕೆ ಮೊರೆ ಹೋಗಿವೆ.

ಈಗಾಗಲೇ ಇಂದು ಬಿಡುಗಡೆಯಾಗುತ್ತಿರುವ ನಿನ್ನ ಸನಿಹಕೆ ಸಿನಿಮಾ ತಂಡ, ಮುಂದೆ ಬಿಡುಗಡೆಯಾಗಲಿರುವ ಸಲಗ ಸಿನಿಮಾ ತಂಡಗಳು ಪ್ರಿರಿಲೀಸ್ ಈವೆಂಟ್ ಆಯೋಜಿಸುತ್ತಿವೆ. ಇನ್ನು, ಕೋಟಿಗೊಬ್ಬ 3 ಸಿನಿಮಾ ಕೂಡಾ ಪ್ರಿರಿಲೀಸ್ ಈವೆಂಟ್ ಮಾಡುವ ಯೋಚನೆ ಹೊಂದಿದೆ. ಈ ಮೂಲಕ ಸ್ಟಾರ್ ನಟರನ್ನು ಕರೆತಂದು ಜನರ ಮುಂದೆ ಚಿತ್ರದ ಬಗ್ಗೆ ಪ್ರಚಾರ ಕೊಟ್ಟು ಸಿನಿಮಾ ವೀಕ್ಷಿಸಲು ಥಿಯೇಟರ್ ನತ್ತ ಸೆಳೆಯುವುದು ಯೋಜನೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಾಜಲ್ ಅಗರ್ವಾಲ್ ಬಗ್ಗೆ ಹೆಚ್ಚಾಯ್ತು ಗುಸು ಗುಸು!