Publish Date: Fri, 08 Oct 2021 (09:11 IST)
Updated Date: Fri, 08 Oct 2021 (09:13 IST)
ಬೆಂಗಳೂರು: ಡಾ.ರಾಜ್ ಕುಮಾರ್ ವಂಶದ ಮತ್ತೊಂದು ಕುಡಿ ಬೆಳ್ಳಿ ತೆರೆಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ ಮೊದಲ ಸಿನಿಮಾ ನಿನ್ನ ಸನಿಹಕೆ ಇಂದು ಬಿಡುಗಡೆಯಾಗಿದೆ.
ಡಾ.ರಾಜ್ ಕುಟುಂಬದಿಂದ ಹೆಣ್ಣು ಮಗಳೊಬ್ಬಳು ಸಿನಿಮಾ ರಂಗಕ್ಕೆ ನಟಿಯಾಗಿ ಕಾಲಿಟ್ಟಿರುವುದು ವಿಶೇಷ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಸಾಕಷ್ಟಿದೆ.
ಧನ್ಯಾ ಜೊತೆಗೆ ಸೂರಜ್ ನಾಯಕರಾಗಿ ಅಭಿನಯಿಸಿರುವ ರೊಮ್ಯಾಂಟಿಕ್ ಸಿನಿಮಾ ನಿನ್ನ ಸನಿಹಕೆ ನೋಡಿ ಈಗಾಗಲೇ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಪ್ರೇಕ್ಷಕರ ಸರದಿ.