Select Your Language

Notifications

webdunia
webdunia
webdunia
webdunia

ನಟಿ ಜಯಶ್ರೀ ಆತ್ಮಹತ್ಯೆ: ಡೆತ್ ನೋಟ್ ನಲ್ಲಿದೆ ಅಸಲಿ ಸತ್ಯ

ನಟಿ ಜಯಶ್ರೀ ಆತ್ಮಹತ್ಯೆ: ಡೆತ್ ನೋಟ್ ನಲ್ಲಿದೆ ಅಸಲಿ ಸತ್ಯ
ಬೆಂಗಳೂರು , ಬುಧವಾರ, 27 ಜನವರಿ 2021 (10:56 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಒಂದು ಟ್ವಿಸ್ಟ್ ಸಿಕ್ಕಿದೆ. ಡೆತ್ ನೋಟ್ ನಲ್ಲಿ ಜಯಶ್ರೀ ತಮ್ಮ ಸಾವಿನ ಅಸಲಿ ಸತ್ಯ ಬಹಿರಂಗಪಡಿಸಿದ್ದಾರೆ.


ಕೆಲವು ದಿನಗಳ ಹಿಂದೆ ಜಯಶ್ರೀ ತಮ್ಮೆಲ್ಲಾ ಸಮಸ್ಯೆಗಳಿಗೂ ಮಾವನ ಕಿರುಕುಳ ಕಾರಣ ಎಂದಿದ್ದರು. ಆಸ್ತಿ ವಿಚಾರವಾಗಿ ಮಾವನ ಜೊತೆ ಕಿತ್ತಾಟವಾಗಿದೆ ಎಂದಿದ್ದರು. ಆದರೆ ಸಾವಿಗೂ ಮುನ್ನ ಬರೆದ ಪತ್ರದಲ್ಲಿ ಮಾವನ ವಿರುದ್ಧ ಮಾಡಿದ್ದ ಆರೋಪಗಳೇ ಸುಳ್ಳು. ನಾನು ಚಿಕ್ಕಂದಿನಿಂದಲೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೆ. ಇದರಿಂದ ಹೊರಬರಲು ಮಾವ ನನಗೆ ಸಹಾಯ ಮಾಡಿದ್ದರು. ಆದರೆ ನಾನು ಅವರ ವಿರುದ್ಧವೇ ಸುಳ್ಳು ಆರೋಪ ಮಾಡಿ ತಪ್ಪು ಮಾಡಿದೆ. ನನ್ನ ಯಾವ ಸಮಸ್ಯೆಗಳಿಗೂ ಮಾವ ಕಾರಣರಲ್ಲ. ನನ್ನ ಅಭಿವೃದ್ಧಿ ಮತ್ತು ಅಧಃಪತನ ಎರಡಕ್ಕೂ ನಾನೇ ಕಾರಣ’ ಎಂದು ಪತ್ರದಲ್ಲಿ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೆಬ್ ಸರಣಿಗೆ ಕಾಲಿಟ್ಟ ನಟಿ ಅಮಲಾ ಪೌಲ್