Webdunia - Bharat's app for daily news and videos

Install App

ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ ಜಗ್ಗಿ ಜಗನ್ನಾಥ್ ಚಿತ್ರ

Webdunia
ಮಂಗಳವಾರ, 25 ಫೆಬ್ರವರಿ 2020 (13:15 IST)
ಜಗ್ಗಿ ಜಗನ್ನಾಥ..ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಗೆ ಸಿದ್ದವಾಗಿರೋ ಚಿತ್ರ. ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಟ್ರೈಲರ್ ಮೂಲಕ ಸೌಂಡ್ ಮಾಡ್ತಿರೋ ಈ ಚಿತ್ರವನ್ನು ಹಿರಿಯ ನಿರ್ದೇಶಕ  ಓಂ ಸಾಯಿ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಲಿಖಿತ್, ದುನಿಯಾ ರಶ್ಮಿ  ಅಭಿನಯಿಸಿರುವ ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಖಾಕಿ ತೊಟ್ಟಿದ್ದಾರೆ. ಚಿತ್ರದ ಟ್ರೈಲರ್ನಲ್ಲಿ ಡೈಲಾಗ್ ಕಿಂಗ್ ಪವರ್ ಫುಲ್ ಡೈಲಾಗ್ ಹಾಗೂ ಆಕ್ಷನ್ ಸೀನ್ಗಳು ಸಖತ್ ಕಿಕ್ ಕೊಡುತ್ತಿವೆ.
ಫೆಬ್ರವರಿ 28ಕ್ಕೆ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ರೌಡಿಸಂ, ಮಾಫಿಯ ಜಗತ್ತು, ಪ್ರೇಮ್ ಕಹಾನಿ, ಪೊಲೀಸ್ ಸೂಪರ್ ಕಾಪ್ ಸ್ಟೋರಿ ಚಿತ್ರದಲ್ಲಿದ್ದು, ಹೊಸ ಪ್ರತಿಭೆ ಲಿಖಿತ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಪೆಟ್ರೋಲ್ ಪ್ರಸನ್ನ ಚಿತ್ರದಲ್ಲಿ ವಿಲನ್ ಆಗಿ ಬಣ್ಣ ಹಚ್ಚಿದ್ದು, ಪದ್ಮಜಾ ರಾವ್, ತಬಲ ನಾಣಿ, ಪವನ್, ಮೈಕೋ ನಾಗರಾಜ್, ವಾಣಿಶ್ರೀ, ಮೋಹನ್ ಜುನೇಜಾ ಸೇರಿದಂತೆ ಹಲವು ಕಲಾವಿದರು ಜಗ್ಗಿ ಜಗನ್ನಾಥ ಚಿತ್ರದ ತಾರಾಬಳಗದಲ್ಲಿದ್ದಾರೆ.
ಹೆಚ್.ಜಯರಾಜು, ಜಿ.ಶಾರಾದ ನಿರ್ಮಾಪಕರಾಗಿರೋ ಈ ಚಿತ್ರ ಜೈ ಮೈಲಾರ ಲಿಂಗೇಶ್ವರ ಮೂವೀಸ್ ಬ್ಯಾನರ್ನಡಿ ನಿರ್ಮಾಣವಾಗಿದೆ, ಎ.ಎಂ ನೀಲ್ ಸಂಗೀತ ನಿರ್ದೇಶನವಿರುವ ಜಗ್ಗಿ ಜಗನ್ನಾಥ್ ಚಿತ್ರ ಫೆಬ್ರವರಿ 28ಕ್ಕೆ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡಲಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments