Publish Date: Fri, 04 Jan 2019 (09:46 IST)
Updated Date: Fri, 04 Jan 2019 (09:47 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರಮುಖ ತಾರೆಯರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿರಬೇಕಾದರೆ ನವರಸನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಒಂದು ಕುತೂಹಲ ಕೆರಳಿಸುವಂತಿದೆ.
ಭಾರೀ ಸಂಪತ್ತು ಕೂಡಿ ಹಾಕಿರುವ ಸ್ಟಾರ್ ಗಳಿಗೆ ಟಾಂಗ್ ಕೊಡುವಂತೆ ಜಗ್ಗೇಶ್ ಟ್ವೀಟ್ ಒಂದನ್ನು ಮಾಡಿದ್ದಾರೆ. ಆದರೆ ಸಾಮಾನ್ಯವಾಗಿ ಇಂತಹ ಬುದ್ಧಿಮಾತುಗಳನ್ನು ಟ್ವೀಟ್ ಮಾಡುವ ಜಗ್ಗೇಶ್ ಇದು ಸಹಜವಾಗಿಯೇ ಮಾಡಿರುವ ಟ್ವೀಟೋ, ಬೇಕೆಂದೇ ಇಂದಿನ ಸ್ಯಾಂಡಲ್ ವುಡ್ ತಾರೆಯರ ಸ್ಥಿತಿ ಗತಿಯ ಬಗ್ಗೆ ಪರೋಕ್ಷವಾಗಿ ಹೇಳಿರುವ ಮಾತೋ ಎಂಬ ಸಂಶಯ ಮೂಡಿಸಿದೆ.
‘ಮನುಜನ ನೆಮ್ಮದಿಗೆ ಸೂತ್ರ: ಹಾಸಿಗೆ ಇದ್ದಷ್ಟು ಕಾಲು ಚಾಚು! ಉತ್ತಮರ ಸಾಂಗತ್ಯ! ಉಪಯುಕ್ತವಲ್ಲದ ಸ್ನೇಹದಿಂದ ದೂರ! ಅಜ್ಞಾನಿಗಳ ಅನಿಸಿಕೆಗೆ ಉತ್ತರಿಸದೆ ಮೌನ! ತನ್ನ ತಾನು ರಕ್ಷಣೆಗೆ ಚಾಣಕ್ಯ ನೀತಿ! ತಲೆಎತ್ತಿ ಬಾಳುವ ಸ್ವಾಭಿಮಾನ ಗುಣ! ದುಷ್ಟರಿಂದ ದೂರ! ಕಂಡವರ ಕತೆಯಲ್ಲಿ ಉತ್ಸುಕತೆ ಬೇಡ! ಅನ್ಯ ಸ್ತ್ರೀಯಿಂದ ಅಂತರ! ದೈವಭಕ್ತಿ!’ ಹೀಗಂತ ಜಗ್ಗೇಶ್ ಮಾಡಿರುವ ಟ್ವೀಟ್ ಕುತೂಹಲ ಕೆರಳಿಸುವಂತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ