Publish Date: Thu, 03 Jan 2019 (16:54 IST)
Updated Date: Thu, 03 Jan 2019 (16:56 IST)
ಬೆಂಗಳೂರು: ಬೆಳಿಗ್ಗೆಯಿಂದ ತಮ್ಮ ನಿವಾಸಗಳ ಮೇಲೆ ನಡೆಯುತ್ತಿರುವ ಐಟಿ ದಾಳಿ ಬಗ್ಗೆ ನಟರಾದ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈನಿಂದ ಈಗಷ್ಟೇ ಬೆಂಗಳೂರಿಗೆ ಬಂದಿಳಿದ ಯಶ್ ಐಟಿ ದಾಳಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಇದರ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ. ಫಸ್ಟ್ ಟೈಮ್ ಇದು ನಂಗೂ. ಏನಾಗಿದೆ ಮನೆಯಲ್ಲಿ ಅಂತ ನನಗೂ ಗೊತ್ತಿಲ್ಲ. ಆದರೆ ಇದೆಲ್ಲಾ ಪ್ರೊಸೀಜರ್ ಅಷ್ಟೇ. ಅದಕ್ಕೆ ತಲೆಕೆಡಿಸಿಕೊಳ್ಳುಂವತದ್ದು ಏನೂ ಇಲ್ಲ. ಕೆಜಿಎಫ್ ಯಶಸ್ಸಿನಿಂದ ಹೀಗಾಯ್ತು ಎನ್ನುವುದೆಲ್ಲಾ ಸುಳ್ಳು. ನಾವು ದೇಶದ ಪ್ರಜೆಗಳಾಗಿ ಕಾನೂನಿಗೆ ಒಳಪಟ್ಟವರೇ ಅಲ್ವಾ? ಎಲ್ಲವನ್ನೂ ಪರಿಶೀಲನೆ ಮಾಡ್ತಿದ್ದಾರೆ ಅಷ್ಟೇ’ ಎಂದು ಯಶ್ ಹೇಳಿದ್ದಾರೆ.
ಇನ್ನೊಂದೆಡೆ ತಮ್ಮ ನಿವಾಸದ ಎದುರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸುದೀಪ್ ‘ನಾನು ಯಾಕೆ ಭಯಪಡ್ಲಿ? ಬಹುಶಃ ಈಗ ಮೂರು ಬಿಗ್ ಬಜೆಟ್ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಅದಕ್ಕೇ ಪರಿಶೀಲನೆ ಮಾಡ್ತಿದ್ದಾರೆ ಅಷ್ಟೇ. ಮನೆಯಲ್ಲಿ ತಾಯಿ ಒಬ್ಬರೇ ಇದ್ದಾರೆ ಎಂಬ ಕಾರಣಕ್ಕೆ ಮನೆಗೆ ಬಂದೆ. ಇಲ್ಲದೇ ಇದ್ದರೆ ಫೋನ್ ನಲ್ಲೇ ಎಲ್ಲಾ ವ್ಯವಹಾರ ನೋಡಿಕೊಳ್ಳುತ್ತಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಿರುವಾಗ ಯಾಕೆ ಭಯ ಪಡ್ಲಿ?’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ