Select Your Language

Notifications

webdunia
webdunia
webdunia
webdunia

ಐಟಿ ಅಧಿಕಾರಿಗಳ ಪ್ರಶ್ನೆಗೆ ರಾಧಿಕಾ ಪಂಡಿತ್ ಕಂಗಾಲು: ಕೆಜಿಎಫ್ ಸಕ್ಸಸ್ಸೇ ಯಶ್ ಗೆ ಮುಳುವಾಯಿತೇ?

ಐಟಿ ಅಧಿಕಾರಿಗಳ ಪ್ರಶ್ನೆಗೆ ರಾಧಿಕಾ ಪಂಡಿತ್ ಕಂಗಾಲು: ಕೆಜಿಎಫ್ ಸಕ್ಸಸ್ಸೇ ಯಶ್ ಗೆ ಮುಳುವಾಯಿತೇ?
ಬೆಂಗಳೂರು , ಗುರುವಾರ, 3 ಜನವರಿ 2019 (16:29 IST)
ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿರುವ ದಿಡೀರ್ ದಾಳಿಯಿಂದ ತಾರೆಯರು ಕಂಗಾಲಾಗಿದ್ದಾರೆ.


ರಾಕಿಂಗ್ ಸ್ಟಾರ್ ಯಶ್ ಆದಾಯದ ಬಗ್ಗೆ ಪರಿಶೀಲನೆ ನಡೆಸಲು ರಾಧಿಕಾ ಪಂಡಿತ್ ತವರು ಮನೆಗೂ ಬಂದ ಅಧಿಕಾರಿಗಳು ಯಶ್ ಮಾವ ಮತ್ತು ಪತ್ನಿ ರಾಧಿಕಾ ಪಂಡಿತ್ ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದ್ದಾರೆ. ಮುಖ್ಯವಾಗಿ ಕೆಜಿಎಫ್ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದು ಯಾರು? ಅದರ ಆದಾಯದ ಬಗ್ಗೆ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳ ಪ್ರಶ್ನೆಗೆ ರಾಧಿಕಾ ಕಂಗಾಲಾದರು ಎನ್ನಲಾಗಿದೆ.

ಇನ್ನು, ಮುಂಬೈಗೆ ತೆರಳಿದ್ದ ಯಶ್ ಈಗಷ್ಟೇ ಬೆಂಗಳೂರಿಗೆ ಆಗಮಿಸಿದ್ದು, ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಇತ್ತೀಚೆಗಷ್ಟೇ ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಹಣ ಕೊಳ್ಳೆ ಹೊಡೆದಿರುವ ಹಿನ್ನಲೆಯಲ್ಲಿ ಯಶ್ ಮೇಲೆ ಅಧಿಕಾರಿಗಳು ತೀವ್ರ ಅನುಮಾನ ಹೊಂದಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಯಶಸ್ಸಿನ ಹಿನ್ನಲೆಯಲ್ಲಿ ಯಶ್ ಆದಾಯ ಮುಚ್ಚುಮರೆ ಮಾಡಿರಬಹುದಾ ಎಂಬ ಬಗ್ಗೆ ಅಧಿಕಾರಿಗಳು ತೀವ್ರ ಅನುಮಾನ ಹೊಂದಿದ್ದಾರೆ. ಇದೇ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಟರ ಮೇಲೆ ಐಟಿ ದಾಳಿಗೆ ಎರಡು ದಿನದ ಮೊದಲೇ ನಡೆದಿತ್ತಾ ಪ್ಲ್ಯಾನ್? ಐಟಿ ದಾಳಿ ಹಿಂದಿನ ಸೀಕ್ರೆಟ್ ಏನು?