Publish Date: Fri, 04 Jan 2019 (09:19 IST)
Updated Date: Fri, 04 Jan 2019 (09:21 IST)
ಬೆಂಗಳೂರು: ನಿನ್ನೆಯಿಂದ ಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ ದಾಳಿ ನಡೆಸುತ್ತಿರುವ ಐಟಿ ಅಧಿಕಾರಿಗಳಿಗೆ ದೊಡ್ಡ ದಾಖಲೆಗಳ ಸಂಗ್ರಹವೇ ಸಿಕ್ಕಿದೆ ಎನ್ನಲಾಗಿದೆ.
ಇಂದೂ ಕೂಡಾ ಯಶ್, ಪುನೀತ್, ಸುದೀಪ್ ಮುಂತಾದ ಸ್ಟಾರ್ ಗಳ ಮನೆಯಲ್ಲಿ ತಪಾಸಣೆ ಮುಂದುವರಿಸಿರುವ ಅಧಿಕಾರಿಗಳಿಗೆ ಈ ಖ್ಯಾತ ನಟರು ಹೂಡಿರುವ ಬಂಡವಾಳಗಳ ವಿವರ ಲಭ್ಯವಾಗಿದೆ.
ಪುನೀತ್ ರಾಜ್ ಕುಮಾರ್ ಮನೆಯಲ್ಲಿ ವಿವಿಧ ಕಟ್ಟಗಳು, ಮದ್ಯದಂಗಡಿಗಳು, ವಾಣಿಜ್ಯ ವ್ಯವಹಾರಗಳ ದಾಖಲೆಗಳ ಸಂಗ್ರಹವೇ ಐಟಿ ಅಧಿಕಾರಿಗಳಿಗೆ ಸಿಕ್ಕಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಪುನೀತ್ ದಂಪತಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಇನ್ನು, ರಾಕಿಂಗ್ ಸ್ಟಾರ್ ಯಶ್ ಕೂಡಾ ಇದರಲ್ಲಿ ಕಮ್ಮಿಯೇನೂ ಇಲ್ಲ. ಯಶ್ ಗೆ ಸುಮಾರು 40 ಕೋಟಿ ರೂ. ಸಾಲವೂ ಇದೆ ಎಂಬ ಮಾಹಿತಿಯೂ ಬಂದಿದೆ. ಒಂದು ಬ್ಯಾಂಕಿನಲ್ಲಿ 13 ಕೋಟಿ, ಇನ್ನೊಂದು ಬ್ಯಾಂಕಿನಲ್ಲಿ 17 ಕೋಟಿ ರೂ. ಸಾಲ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಕಿಚ್ಚ ಸುದೀಪ್ ಮನೆಯಲ್ಲೂ ತಪಾಸಣೆ ಮುಂದುವರಿಸಿರುವ ಅಧಿಕಾರಿಗಳಿಗೆ ಸುದೀಪ್ ಹಲವು ಹೋಟೆಲ್ ಗಳು, ರೆಸಾರ್ಟ್ ಗಳಲ್ಲಿ, ಲಿಕ್ಕರ್ ಶಾಪ್, ರಿಯಲ್ ಎಸ್ಟೇಟ್ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ. ಅಲ್ಲದೆ, ಹಲವು ಐಶಾರಾಮಿ ಕಾರುಗಳ ಮಾಲಿಕತ್ವವನ್ನೂ ಹೊಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ