ಬೆಂಗಳೂರು: ನೀರ್ ದೋಸೆ ಯಶಸ್ಸಿನ ಬಳಿಕ ಜಗ್ಗೇಶ್ ಜೊತೆಗೂಡಿ ನಿರ್ದೇಶಕ ವಿಜಯ ಪ್ರಸಾದ್ ಈಗ ತೋತಾಪುರಿ ಸಿನಿಮಾ ಮಾಡಿದ್ದಾರೆ.
ಇಂದು ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಟ್ರೈಲರ್ ನೋಡಿದ ನೆಟ್ಟಿಗರಿಗೆ ನೀರ್ ದೋಸೆ ಸಿನಿಮಾ ನೆನಪಾಗಿದೆ. ನೀರ್ ದೋಸೆಯಲ್ಲಿ ವಿಜಯ ಪ್ರಸಾದ್ ಡೈಲಾಗ್ ಗಳಿಂದಲೇ ಗೆದ್ದಿದ್ದರು.
ಇದೀಗ ತೋತಾಪುರಿಯಲ್ಲೂ ಕಚಗುಳಿಯಿಡುವ ಡೈಲಾಗ್ ಗಳಿವೆ. ತೋತಾಪುರಿ ಟ್ರೈಲರ್ ಕೂಡಾ ಅಷ್ಟೇ ನಿರೀಕ್ಷೆ ಹುಟ್ಟಿಸುತ್ತಿದೆ. ಹೀಗಾಗಿ ಕೆಲವೇ ನಿಮಿಷಗಳಲ್ಲಿ ಉತ್ತಮ ವೀಕ್ಷಣೆ ಪಡೆದುಕೊಂಡಿದೆ.