Webdunia - Bharat's app for daily news and videos

Install App

ಪುನೀತ್ ಗೆ ಕನ್ನಡವೇ ಬರೋಲ್ಲ ಎಂದಿದ್ದ, ರಕ್ಷಿತಾಗೆ ಗುರುಪ್ರಸಾದ್ ಕಂಡರೇ ಭಯವಿತ್ತು: ಜಗ್ಗೇಶ್

Krishnaveni K
ಸೋಮವಾರ, 4 ನವೆಂಬರ್ 2024 (12:15 IST)
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಬಳಿಕ ನಟ ಜಗ್ಗೇಶ್ ನೀಡಿರುವ ಪ್ರತಿಕ್ರಿಯೆ ಈಗ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಗುರುಪ್ರಸಾದ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದ ಜಗ್ಗೇಶ್, ಹಿಂದೊಮ್ಮೆ ಪುನೀತ್ ರಾಜ್ ಕುಮಾರ್ ಗೇ ಕನ್ನಡ ಮಾತನಾಡಕ್ಕೆ ಬರಲ್ಲ ಎಂದಿದ್ದ, ರಕ್ಷಿತಾಗೆ ಅವನನ್ನು ಕಂಡರೇ ಭಯವಿತ್ತು ಎಂದು ಹೇಳಿದ್ದಾರೆ.

ಗುರುಪ್ರಸಾದ್ ಆತ್ಮಹತ್ಯೆಯ ಸುದ್ದಿ ಕೇಳಿಬಂದ ತಕ್ಷಣ ಖಾಸಗಿ ಮಾಧ್ಯಮಗಳು ಜಗ್ಗೇಶ್ ರನ್ನು ಮಾತನಾಡಿಸಿದ್ದವು. ಜಗ್ಗೇಶ್ ಗೆ ಮಠದಂತಹ ಹಿಟ್ ಸಿನಿಮಾ ಕೊಟ್ಟು ಚಿತ್ರರಂಗದಲ್ಲಿ ಪುನರ್ ಜನ್ಮ ಕೊಟ್ಟ ನಿರ್ದೇಶಕ ಗುರುಪ್ರಸಾದ್. ಆದರೆ ಬಳಿಕ ಇಬ್ಬರ ನಡುವೆ ಮನಸ್ತಾಪವಾಗಿ ಮತ್ತೆ ಪ್ಯಾಚ್ ಅಪ್ ಆಗಿ ಏನೆಲ್ಲವೋ ಆಗಿ ಹೋಯ್ತು.

ಆದರೆ ಈಗ ಗುರುಪ್ರಸಾದ್ ತೀರಿಕೊಂಡ ಬಳಿಕ ಆತ ಅಹಂಕಾರಿಯಾಗಿದ್ದ, ವಿಪರೀತ ಸಾಲ ಮಾಡಿಕೊಂಡಿದ್ದ, ತನ್ನ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ವ್ಯಕ್ತಿಯನ್ನೇ ಮದುವೆಯಾದ ಎಂದೆಲ್ಲಾ ಆಪಾದನೆ ಹೊರಿಸಿರುವ ಜಗ್ಗೇಶ್, ಈ ಹಿಂದೆ ಗುರುಪ್ರಸಾದ್ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದನ್ನು ಮತ್ತು ರಕ್ಷಿತಾ ಪ್ರೇಮ್ ಹೇಳಿರುವುದನ್ನು ಹೇಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

‘ಸ್ವತಃ ಅಪ್ಪು ನನ್ನ ಬಳಿ ಅವನ ಬಗ್ಗೆ ಹೇಳಿಕೊಂಡು ಬೇಸರ ಮಾಡಿಕೊಂಡಿದ್ದ. ಏನ್ ಸಾರ್ ನನಗೇ ಕನ್ನಡ ಸರಿಯಾಗಿ ಬರಲ್ಲ ಎಂದು ಬಿಟ್ಟಿದ್ದರು ಎಂದು ಪುನೀತ್ ನನ್ನ ಬಳಿ ಬೇಸರದಿಂದ ಹೇಳಿಕೊಂಡಿದ್ದರು. ಇನ್ನು, ರಕ್ಷಿತಾ ಪ್ರೇಮ್ ಅವರಂತೂ ಅವರೆಂದರೆ ಕಾಂಟ್ರವರ್ಸಿ ಎಂದು ಭಯ ಬಿದ್ದು ಬಿಡೋರು. ಕಾಮಿಡಿ ಕಿಲಾಡಿಗಳು ವೇದಿಕೆಗೆ ಏನೋ ಬೋರ್ ಆಗ್ತಾಯಿದೆ, ಗುರುಪ್ರಸಾದ್ ರನ್ನು ಕರೆಸೋಣ ಅಂತ ನಾನು ಕಾಲೆಳೆದರೆ ಸಾರ್.. ಅವರು ಬರ್ತಾರೆ ಎಂದರೆ ನಾನು ಹೊರಟು ಬಿಡ್ತೀನಿ ಎಂದು ಬಿಡೋರು’ ಎಂದಿದ್ದಾರೆ.

ಆದರೆ ಒಬ್ಬ ವ್ಯಕ್ತಿ ಸತ್ತ ಬಳಿಕವೂ ಆತನ ವ್ಯಕ್ತಿತ್ವದ ಬಗ್ಗೆಹೀಗೆ ಮಾತನಾಡೋದು ಎಷ್ಟು ಸರಿ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಜಗ್ಗೇಶ್ ಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸತ್ತ ವ್ಯಕ್ತಿ ಬಗ್ಗೆ ಹೀಗೆಲ್ಲಾ ತೇಜೋವಧೆ ಮಾಡಬಾರದು. ಏನೇ ಹೇಳುವುದಿದ್ದರೂ ಬದುಕಿದ್ದಾಗ ಹೇಳಬೇಕು ಎಂದು ಹಲವರು ಕಿಡಿ ಕಾರಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಮುಂದಿನ ಸುದ್ದಿ
Show comments