Webdunia - Bharat's app for daily news and videos

Install App

ನಿರ್ದೇಶಕ ಗುರುಪ್ರಸಾದ್ ಸಾವಿನ ರಹಸ್ಯ ಬೇಧಿಸಲು ಮುಂದಾದ ಪೊಲೀಸರು

Krishnaveni K
ಸೋಮವಾರ, 4 ನವೆಂಬರ್ 2024 (10:48 IST)
Photo Credit: X
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸರ ಅನುಮಾನ ಇನ್ನೂ ತೀರಿಲ್ಲ. ಸಾವಿನ ರಹಸ್ಯ ಬೇಧಿಸಲು ಪೊಲೀಸರು ಮುಂದಾಗಿದ್ದಾರೆ.

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮೃತದೇಹ ಅವರ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿಪತ್ತೆಯಾಗಿತ್ತು. ವಿಪರೀತ ಸಾಲ ಮಾಡಿದ್ದ ಗುರುಪ್ರಸಾದ್ ತೀರಿಸಲಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಅವರ ಎರಡನೇ ಪತ್ನಿ ಹೇಳಿಕೆ ನೀಡಿದ್ದರು.

ಆದರೆ ಇಷ್ಟಕ್ಕೇ ಪೊಲೀಸರು ಸುಮ್ಮನಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಗುರುಪ್ರಸಾದ್ ಸಾವನ್ನಪ್ಪಿ ಮೂರು ದಿನಗಳಾಗಿರಬಹುದು. ಇಷ್ಟು ದಿನಗಳಾಗಿದ್ದರೂ ಅವರ ಸಾವಿನ ಸಂಗತಿ ಯಾರಿಗೂ ಗೊತ್ತಾಗದೇ ಹೋಗಿದ್ದು ಯಾಕೆ ಎಂದು ಎಲ್ಲರೂ ಅಚ್ಚರಿಪಡುವಂತಾಗಿದೆ.

ಇನ್ನು, ಅವರಿಗೆ ಸಾಲಗಾರರು ಬೆದರಿಕೆ ಹಾಕಿದ್ದರೇ, ಮಾನಸಿಕ ಒತ್ತಡಕ್ಕೊಳಗಾಗಿದ್ದಾರೇ ಎಂಬಿತ್ಯಾದಿ ವಿಚಾರಗಳನ್ನು ತಿಳಿಯಲು ಪೊಲೀಸರು ಈಗ ಅವರ ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದ್ದಾರೆ.  ಸಾವಿಗೆ ಮುನ್ನ ಡೆತ್ ನೋಟ್ ಏನಾದರೂ ಮೊಬೈಲ್, ಲ್ಯಾಪ್ ಟಾಪ್ ನಲ್ಲಿ ಸೇವ್ ಮಾಡಿರಬಹುದೇ ಎಂಬಿತ್ಯಾದಿ ವಿವರಗಳನ್ನು ಪಡೆಯಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments