ನವದೆಹಲಿ: ದೆಹಲಿ-ದುಬೈ ನಡುವೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಭಾರೀ ಭದ್ರತಾ ಲೋಪವಾಗಿದ್ದು, ಮದ್ದುಗುಂಡಿ ಕಾರ್ಟ್ರಿಡ್ಜ್ ಪತ್ತೆಯಾಗಿರುವುದಾಗಿ ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಅಕ್ಟೋಬರ್ 27 ರಂದು ದುಬೈನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಸೀಟಿನ ಪಾಕೆಟ್ ನಲ್ಲಿ ಒಂದು ಮದ್ದುಗುಂಡಿನ ಕಾರ್ಟ್ರಿಡ್ಜ್ (Ammunition Cartridge) ಪತ್ತೆಯಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ಸ್ಪೋಟಕ ಮಾಹಿತಿ ನೀಡಿದ್ದಾರೆ.
ಮದ್ದುಗುಂಡುಗಳ ಕಾರ್ಟ್ರಿಡ್ಜ್ ಕಂಡು ಬಂದ ತಕ್ಷಣವೇ ನಿಯಮಾನುಸಾರ ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮದ್ದುಗುಂಡುಗಳ ಕಾರ್ಟ್ರಿಡ್ಜ್ ಬಂದೂಕಿಗೆ ಬಳಸುವ ಸಾಮಗ್ರಿಯಾಗಿದ್ದು ಇದನ್ನು ವಿಮಾನದಲ್ಲಿ ತೆಗೆದುಕೊಂಡಲು ಹೋಗಲು ನಿಷೇಧವಿದೆ.
ಇದು ಅತ್ಯಂತ ಗಂಭೀರ ಭದ್ರತಾ ಲೋಪವಾಗಿದೆ ಎಂದೇ ಪರಿಗಣಿಸಲಾಗಿದೆ. ಇತ್ತೀಚೆಗೆ ವಿಮಾನಗಳಿಗೆ ಬಾಂಬ್ ಬೆದರಿಕೆ ಬೆನ್ನಲ್ಲೇ ಈ ಘಟನೆ ವರದಿಯಾಗಿರುವುದು ಗಂಭೀರ ವಿಚಾರವಾಗಿದೆ. ಇದೀಗ ಏರ್ ಇಂಡಿಯಾ ವಿಮಾನದಲ್ಲಿ ಮದ್ದುಗುಂಡುಗಳನ್ನು ತಂದಿಟ್ಟಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.