Select Your Language

Notifications

webdunia
webdunia
webdunia
webdunia

ರಾಯರ ಪವಾಡದ ಅನುಭವ ವಿವರಿಸಿದ ನವರಸನಾಯಕ ಜಗ್ಗೇಶ್

ರಾಯರ ಪವಾಡದ ಅನುಭವ ವಿವರಿಸಿದ ನವರಸನಾಯಕ ಜಗ್ಗೇಶ್
ಬೆಂಗಳೂರು , ಸೋಮವಾರ, 16 ನವೆಂಬರ್ 2020 (11:35 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಗುರು ರಾಘವೇಂದ್ರರ ಪರಮ ಭಕ್ತರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜಗ್ಗೇಶ್ ಈಗ ತಮಗೆ ರಾಯರ ವಿಚಾರದಲ್ಲಿ ಆದ ಪವಾಡ ಸದೃಷ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.


ಒಂದು ದಿನ ಮಡದಿ ನೀಡಿದ ಊಟ ಮುಗಿಸಿ ರಾಯರ ಫೋಟೋ ನೋಡುತ್ತಾ ಭಕ್ತಿಪರವಶನಾಗಿ ಕೂತಿದ್ದೆ. ರಾಯರೇ ನನಗೆ ಜೀವನದಲ್ಲಿ ಇದುವರೆಗೆ ಬೇಡಿದ್ದನ್ನೆಲ್ಲಾ ಕೊಟ್ಟಿದ್ದೀರಿ, ಕೊಡುತ್ತಲೂ ಇದ್ದೀರಿ. ಆದರೆ ಪರಮ ಪಾಪಿಯಾದ ನಾನು ನಿಮ್ಮನ್ನು ಶಾಸ್ತ್ರೋಸ್ತ್ರಕವಾಗಿ ಭಜಿಸುವ ಭಾಗ್ಯ ಪಡೆದಿಲ್ಲ.  ಕಲಿಯುವ ವಯಸ್ಸಲ್ಲಿ ಅಪ್ಪ ಬಿಡಲಿಲ್ಲ. ಅಲ್ಪ ಸ್ವಲ್ಪ ಚಿತ್ರಗೀತೆ ಹಾಡುವೆ. ದಯಮಾಡಿ ನಿಮ್ಮ ಮುಂದೆ ಕೂತು ಹಾಡಲು ಆಶೀರ್ವದಿಸಿ ಎಂದು ಬೇಡಿಕೊಂಡೆ. ಮಿಂಚಿನಂತೆ ಮಂತ್ರಾಯಲದಿಂದ ಪಿಆರ್ ಒ ನರಸಿಂಹಾಚಾರ್ ರಿಂದ ವಿಡಿಯೋ ಕಾಲ್ ಬಂತು. ಸಾಕ್ಷಾತ್ ಬೃಂದಾವನದ ದರ್ಶನವಾಯಿತು. ಅಳು ತಡೆಯಲಾಗಲಿಲ್ಲ. ಮನಬಿಚ್ಚಿ ರಾಯರಿಗೆ ಧನ್ಯವಾದ ಹೇಳಿದೆ. ಈ ಸರಿಹೊತ್ತಿನಲ್ಲಿ ರಾಯರ ಬೃಂದಾವನ ದರ್ಶನ ಮಾಡಲು ನನಗೆ ಮಾಡಿಸಲು ಏನು ಪ್ರೇರಣೆಯಾಯಿತು ಎಂದು ಕೇಳಿದೆ. ಬೃಂದಾವನ ಅಲಂಕಾರ ತೆಗೆಯಬೇಕಾದರೆ ಅಲ್ಲೇ ನಿಂತಿದ್ದೆ. ಇದ್ದಕ್ಕಿದ್ದಂತೆ ಜಗ್ಗೇಶನಿಗೆ ರಾಯರ ಬೃಂದಾವನ ತೋರಿಸುವಂತೆ ಪ್ರೇರಣೆಯಾಯಿತು ಎಂದರು. ಕೋಟಿ ಬಾರಿ ನಮಿಸಿ ಹೇಳುವೆ, ರಾಯರು ತಾಯಂತೆ, ಮಕ್ಕಳು ಬಯಸಿದಾಗ ಬಂದು ಬಿಡುವರು’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕೀರ್ತಿ ಸುರೇಶ್ ಅಭಿನಯದ ‘ಸಾನಿ ಕೈದಂ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ