Publish Date: Mon, 16 Nov 2020 (10:20 IST)
Updated Date: Mon, 16 Nov 2020 (10:23 IST)
ಬೆಂಗಳೂರು: ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ತಂದೆ, ಛಾಯಾಗ್ರಾಹಕರಾಗಿದ್ದ ದಿವಂಗತ ಗೌರೀಶಂಕರ್ ಬಗ್ಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ.
ತಮ್ಮ ತಂದೆಯ ಪುಣ್ಯಸ್ಮರಣೆಯ ದಿನದಂದು ರಕ್ಷಿತಾ ಇಂತಹದ್ದೊಂದು ಭಾವುಕ ಸಂದೇಶ ಬರೆದುಕೊಂಡಿದ್ದಾರೆ. ನೀವು ಹೋಗಿ 16 ವರ್ಷಗಳೇ ಕಳೆದಿವೆ. ಆದರೆ ನಿಮ್ಮ ಬಗ್ಗೆ ಯೋಚಿಸದ ಒಂದು ದಿನವೂ ಇರಲಿಲ್ಲ. ನಮ್ಮ ಜೀವನದಲ್ಲಿ ನೀವಿಲ್ಲದೇ ಎಷ್ಟೋ ವಿಚಾರಗಳನ್ನು ಮಿಸ್ ಮಾಡಿಕೊಂಡಿದ್ದೇವೆ. ನಿಮ್ಮ ಬಗ್ಗೆ ಯೋಚಿಸುವಾಗ ನನಗೆ ತುಂಬಾ ನೋವಾಗುತ್ತದೆ. ನೀವು ಯಾವತ್ತೂ ನನ್ನ ಹೃದಯದಲ್ಲಿದ್ದೀರಿ. ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ ಅಪ್ಪಾಜಿ. ನನ್ನನ್ನು ಜನ ಗೌರಿ ಮಗಳು ಎಂದು ಗುರುತಿಸುವಾಗ ಹೆಮ್ಮೆಯಾಗುತ್ತದೆ. ನಿಮ್ಮ ಆಶೀರ್ವಾದ ಯಾವತ್ತೂ ನಮ್ಮ ಮೇಲಿರುತ್ತದೆ ಎಂದು ನನಗೆ ಗೊತ್ತು. ನಿಮ್ಮನ್ನು ಯಾವತ್ತೂ ಮಿಸ್ ಮಾಡಿಕೊಳ್ಳುತ್ತೇನೆ ಎಂದು ರಕ್ಷಿತಾ ತಂದೆ ಬಗ್ಗೆ ಬರೆದುಕೊಂಡಿದ್ದಾರೆ.