Webdunia - Bharat's app for daily news and videos

Install App

ಏನ್ ಗುರೂ ಕನ್ನಡ ಇಲ್ವಾ? ತೋತಾಪುರಿ ಹಾಡಿಗೆ ಜಗ್ಗೇಶ್ ಕೊಟ್ರು ಸ್ಪಷ್ಟನೆ

Webdunia
ಶನಿವಾರ, 29 ಜನವರಿ 2022 (17:37 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯಿಸಿರುವ ತೋತಾಪುರಿ ಸಿನಿಮಾದ ಹಾಡಿನ ಟೀಸರ್ ಒಂದನ್ನು ಮೊನ್ನೆಯಷ್ಟೇ ಬಿಡುಗಡೆ ಮಾಡಿತ್ತು. ಆದರೆ ಹಾಡಿನ ಟೀಸರ್ ನಲ್ಲಿ ಕೇಳಿ ಬಂದ ಸಾಲುಗಳಲ್ಲಿ ಕನ್ನಡ ಪದಗಳೇ ಮಂಗಮಾಯವಾಗಿತ್ತು. ಇದರಿಂದಾಗಿ ಚಿತ್ರತಂಡ ಟೀಕೆಗೊಳಗಾಗಿತ್ತು.

ಹೆಸರಿಗೆ ಕನ್ನಡ ಸಿನಿಮಾ. ಜಗ್ಗೇಶ್ ಕೂಡಾ ಕನ್ನಡ ಎಂದೇ ಮಾತನಾಡುತ್ತಿರುತ್ತಾರೆ. ಆದರೆ ಅವರ ಹಾಡಿನಲ್ಲಿ ಕನ್ನಡ ಪದಗಳಿಗಿಂತ ಹಿಂದಿ, ಉರ್ದು ಭಾಷೆಯೇ ಅತಿಯಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದರು. ಇದಕ್ಕೀಗ ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.

‘ಜನವರಿ 31 ಕ್ಕೆ ತೋತಾಪುರಿ ಸಿನಿಮಾದ ಹಾಡು ರಿಲೀಸ್ ಆಗಲಿದೆ. ಈ ಹಾಡಿನ ಒಂದು ತುಣುಕು ಹೊರಬಂದಾಗ ಎಲ್ಲರೂ ಯಾಕೆ ಕನ್ನಡ ಪದ ಬಳಸಿಲ್ಲ ಎಂದು ಕೇಳಿದ್ದರು. ಕನ್ನಡ ಸಿನಿಮಾ ರಂಗ ಬಂದು ಇಷ್ಟು ವರ್ಷವಾಗಿದೆ. ಇದುವರೆಗೆ ಹಾಡಿನಲ್ಲಿ ಇಂದ್ರ, ಚಂದ್ರ, ಹೂವು ಹಣ್ಣು ಎಂದೆಲ್ಲಾ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಆದರೆ ಈ ಹಾಡಿನಲ್ಲಿ ನಿರ್ದೇಶಕರು ವಿಭಿನ್ನವಾಗಿ ಹೇಳಿದ್ದಾರೆ. ಸೋಮವಾರ ಸಂಪೂರ್ಣ ಹಾಡು ಬರುತ್ತದೆ. ಹಾಡು ತುಂಬಾ ಚೆನ್ನಾಗಿದೆ. ಸಂಪೂರ್ಣವಾಗಿ ಕನ್ನಡದಲ್ಲಿದೆ. ಕೇಳಿದಾಗ ನಿಮಗೇ ಗೊತ್ತಾಗುತ್ತದೆ’ ಎಂದು ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಮುಂದಿನ ಸುದ್ದಿ
Show comments