Select Your Language

Notifications

webdunia
webdunia
webdunia
webdunia

ನಾ ಹೇಳಿದ್ದಾಗ ಅಪಪ್ರಚಾರ ಮಾಡಿದರು, ಇಂದು ದರ್ಶನ್ ರೇ ಹೇಳಿದರು: ಜಗ್ಗೇಶ್

ಜಗ್ಗೇಶ್
ಬೆಂಗಳೂರು: ರಾಬರ್ಟ್ ತೆಲುಗು ರಿಲೀಸ್ ಗೆ ಅಡ್ಡಿ ಮಾಡಿರುವ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡುವಾಗ ಕನ್ನಡಿಗರ ಭಾಷಾಭಿಮಾನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.


ಕನ್ನಡಿಗರಿಗೇ ಕನ್ನಡದ ಬಗ್ಗೆ ಭಾಷಾಭಿಮಾನ ಇಲ್ಲ. ಬೇರೆ ಭಾಷೆಯವರು ಅವರ ಭಾಷೆ ಮಾತನಾಡುವಾಗ ನಾವು ಅವರ ಭಾಷೆ ಮಾತಾಡ್ತೀವಿ. ನಾವ್ಯಾಕೆ ನಮ್ಮ ಭಾಷೆ ಮಾತಾಡಲ್ಲ ಎಂದಿದ್ದರು. ಈ ಬಗ್ಗೆ ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ‘ಅಂದು ನಾನಾಡಿದ ಮಾತು ಕನ್ನಡಿಗರೇ ಸ್ವಾಭಿಮಾನಿಯಾಗಿ. ಕನ್ನಡಕ್ಕೆ ಮೊದಲು ಕೈ ಎತ್ತಿ ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ ಎಂದು. ನನ್ನ ಭಾವನೆ ಅರ್ಥ ಮಾಡದೇ ಕೆಲವು ಸಮಯ ಸಾಧಕರು ನನ್ನ ಸತ್ಯದ ಸೊಲ್ಲಡಗಿಸಲು ಅಪಪ್ರಚಾರ ಮಾಡಿದರು. ಅದಕ್ಕೇ ನಾನು ಮೌನಕ್ಕೆ ಶರಣು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಾಪಕ ಕರಣ್ ಜೋಹರ್ ಗೆ ವಿಶೇಷ ಉಡುಗೊರೆ ನೀಡಿದ ನಟ ವಿಜಯ್ ದೇವರಕೊಂಡ