Publish Date: Sat, 30 Jan 2021 (09:55 IST)
Updated Date: Sat, 30 Jan 2021 (09:57 IST)
ಬೆಂಗಳೂರು: ರಾಜಕುಮಾರ, ಯವರತ್ನದಂತಹ ಭರ್ಜರಿ ಸಿನಿಮಾ ಮಾಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇತ್ತೀಚೆಗಷ್ಟೇ ಗಂಡು ಮಗುವಿಗೆ ತಂದೆಯಾಗಿದ್ದರು.
ಇದೀಗ ಸಂತೋಷ್ ತಮ್ಮ ಮಗನ ಹೆಸರು ರಿವೀಲ್ ಮಾಡಿದ್ದಾರೆ. ಮುದ್ದಿನ ಮಗನಿಗೆ ಪ್ರಯಾಗ್ ರಾಮ್ ಎಂದು ಹೆಸರಿಟ್ಟಿರುವ ಸಂತೋಷ್ ಆನಂದ್ ರಾಮ್ ಫೋಟೋ ರಿವೀಲ್ ಮಾಡಿದ್ದಾರೆ. ಜೊತೆಗೆ ನೀನು ನನ್ನ ತೊಡೆಯಿಂದ ಹೊರ ಜಗತ್ತಿಗೆ ಕಾಲಿಡಬಹುದು. ಆದರೆ ನನ್ನ ಹೃದಯದಿಂದ ಯಾವತ್ತೂ ಹೊರಗೆ ಕಾಲಿಡಲು ಆಗಲ್ಲ ಎಂದು ಪ್ರೀತಿಯಿಂದ ಸಂದೇಶವನ್ನೂ ಬರೆದಿದ್ದಾರೆ.