Publish Date: Sat, 30 Jan 2021 (09:25 IST)
Updated Date: Sat, 30 Jan 2021 (09:27 IST)
ಬೆಂಗಳೂರು: ಟಾಲಿವುಡ್ ನಲ್ಲಿ ಕನ್ನಡ ಸಿನಿಮಾ ಬಿಡುಗಡೆಗೆ ಅಡ್ಡಿಯಾಗಿರುವ ಹಿನ್ನಲೆಯಲ್ಲಿ ರಾಬರ್ಟ್ ರಿಲೀಸ್ ಮುಂದೂಡಿಕೆಯಾಗಬಹುದಾ ಎಂಬ ಆತಂಕವಿತ್ತು. ಆದರೆ ಏನೇ ಆದರೂ ಮಾರ್ಚ್ 11 ಕ್ಕೇ ತೆಲುಗಿನಲ್ಲೂ ರಾಬರ್ಟ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
ತೆಲುಗಿನಲ್ಲೂ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಮಾಡಲು ಅಲ್ಲಿನ ವಿತರಕರು ಅಡ್ಡಿ ಮಾಡುತ್ತಿದ್ದಾರೆ. ಆದರೆ ಈ ಆತಂಕಗಳು ನಿವಾರಣೆಯಾಗಿ ಸಿನಿಮಾ ನಿಗದಿತ ದಿನದಂದೇ ಬಿಡುಗಡೆಯಾಗಲಿದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ. ಈ ಬಗ್ಗೆ ದಕ್ಷಿಣ ಭಾರತ ಸಿನಿಮಾ ಒಕ್ಕೂಟದ ಜತೆಗೂ ಚರ್ಚೆ ನಡೆಸಲಿದೆ.