Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾ ಬಗ್ಗೆ ಹೀಗೆ ಮಾತನಾಡಿದ್ದ ಶ್ರುತಿ ಹಾಸನ್?! ಹಳೇ ಟ್ವೀಟ್ ವೈರಲ್

ಕನ್ನಡ ಸಿನಿಮಾ ಬಗ್ಗೆ ಹೀಗೆ ಮಾತನಾಡಿದ್ದ ಶ್ರುತಿ ಹಾಸನ್?! ಹಳೇ ಟ್ವೀಟ್ ವೈರಲ್
ಬೆಂಗಳೂರು , ಶನಿವಾರ, 30 ಜನವರಿ 2021 (09:38 IST)
ಬೆಂಗಳೂರು: ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’ ಗೆ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕನ್ನಡ ಸಿನಿಮಾ ಬಗ್ಗೆ ಅವರು ಈ ಹಿಂದೆ ಮಾಡಿದ್ದ ಟ್ವೀಟ್ ಒಂದು ವೈರಲ್ ಆಗಿದೆ.


2017 ರಲ್ಲಿ ಶ್ರುತಿ ಪೊಗರು ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆಗ ಟ್ವಿಟರ್ ಮೂಲಕ ‘ನಾನು ಸದ್ಯದಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುವ ಯೋಚನೆಯನ್ನೇ ಮಾಡಿಲ್ಲ. ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ, ಚರ್ಚೆಯೂ ನಡೆಸಿಲ್ಲ. ಇದೆಲ್ಲಾ ರೂಮರ್’ ಎಂದಿದ್ದರು. ಅಂದು ಕನ್ನಡ ಸಿನಿಮಾದಲ್ಲಿ ನಟಿಸುವ ಯೋಚನೆಯೇ ಇಲ್ಲ ಎಂದಿದ್ದ ಶ್ರುತಿ ಈಗ ಕನ್ನಡ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಟ್ವಿಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದದ ನಡುವೆಯೂ ಮಾರ್ಚ್ 11 ಕ್ಕೇ ತೆಲುಗಿನಲ್ಲಿ ರಾಬರ್ಟ್ ರಿಲೀಸ್