ಬೆಂಗಳೂರು: ನವರಸನಾಯಕ ಜಗ್ಗೇಶ್ ಆತ್ಮೀಯರೊಬ್ಬರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಅವರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಜಗ್ಗೇಶ್ ತಮ್ಮ ಮೆಚ್ಚಿನ ಶಿಕ್ಷಕರನ್ನು ಕಳೆದುಕೊಂಡ ದುಃಖವನ್ನು ಹೊರಹಾಕಿದ್ದಾರೆ. ಚಿಕ್ಕವಯಸ್ಸಿನಲ್ಲೇ ತಾನು ಕಲಾವಿದನಾಗುತ್ತೇನೆಂದು ಹೇಳಿದ ಶಿಕ್ಷಕರಿವರು ಎಂದು ಜಗ್ಗೇಶ್ ಬೇಸರ ಹೊರಹಾಕಿದ್ದಾರೆ.
ನನಗೆ ಗಣಿತ ವಿಜ್ಞಾನ ಪಾಠ ಮಾಡಿ ಒಂದಲ್ಲಾ ಒಂದು ದಿನ ಇವನು ಕಲಾವಿದ ಆಗುತ್ತಾನೆ ಎಂದು ನಾನು 8 ನೇ ಕ್ಲಾಸ್ ನಲ್ಲೇ ಇರಬೇಕಾದರೆ ಭವಿಷ್ಯ ನುಡಿದಿದ್ದ ಶಿಕ್ಷಕರು ಮಾರ್ಚ್ 18 ಕ್ಕೆ ಶಿವನಲ್ಲಿ ಐಕ್ಯವಾದರು. ನಮ್ಮ ಎಂಆರ್ ಎಂ ಸರ್.. ನಮ್ಮ ಹೆಮ್ಮೆಯ ಪ್ರಾಧ‍್ಯಾಪಕರ ಆತ್ಮಕ್ಕೆ ಶಾಂತಿ ಕೋರುವ ನಿಮ್ಮ ತುಂಟ ವಿದ್ಯಾರ್ಥಿ ಈಶ್ವರಗೌಡ. ಎಂದು ಜಗ್ಗೇಶ್ ಭಾವುಕರಾಗಿ ಬರೆದುಕೊಂಡಿದ್ದಾರೆ.