ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಆಪ್ತ ಮಾದೇಗೌಡರ ಪುತ್ರನ ಸಾವಿನ ದುಃಖದಲ್ಲಿದ್ದಾರೆ. ಕೊರೋನಾಗೆ ಬಲಿಯಾದ ತಮ್ಮ ಮಗನ ವಯಸ್ಸಿನ ಯುವಕನ ಸಾವಿನಿಂದ ಮನನೊಂದು ಕೆಲವು ದಿನ ಸಾಮಾಜಿಕ ಜಾಲತಾಣದಿಂದ ದೂರವಿರಲು ನಿರ್ಧರಿಸಿದ್ದಾರೆ.
ತಮ್ಮ ಪುತ್ರನಿಂದ ಕೇವಲ 1 ವರ್ಷ ಕಿರಿಯವನಾದ ಮಾದೇಗೌಡನ ಮಗನಿಗೆ ಇತ್ತೀಚೆಗಷ್ಟೇ ಮಗುವಾಗಿತ್ತು. ಇದ್ದ ಒಬ್ಬನೇ ಮಗ ಮಸಣವೇರಿದ. ಈ ಪೀಡೆರೋಗ ನುಂಗಿ ಹಾಕಿತು. ಅವನ ಸಾವಿನಿಂದ ನನ್ನ ಮನಸ್ಸು ಚೂರಾಗಿದೆ.
ಹೇಗೆ ಸಹಿಸುತ್ತಾನೆ ಮಾದೇಗೌಡ ದುಃಖವ? ನನ್ನ ದೇಹವೇ ಸುಟ್ಟ ಹಾಗಾಗಿದೆ. ಕೆಲವು ದಿನ ಇಲ್ಲಿಂದ ನಾ ದೂರ ಉಳಿಯುವೆ. ಏನು ಮಾಡಿದರೂ ನನಗೆ ಸಮಾಧಾನ ಸಿಗುತ್ತಿಲ್ಲ ಎಂದು ಜಗ್ಗೇಶ್ ಬೇಸರದಿಂದಲೇ ಸರಣಿ ಟ್ವೀಟ್ ಮಾಡಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!