Publish Date: Fri, 14 May 2021 (11:13 IST)
Updated Date: Fri, 14 May 2021 (11:15 IST)
ಬೆಂಗಳೂರು: ಕೊರೋನಾ ನಡುವೆಯೂ ಇಂದು ನಾಡಿನಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ. ಇನ್ನೊಂದೆ ಇಂದು ಕಾಯಕವೇ ಕೈಲಾಸ ಎಂದ ಬಸವಣ್ಣನವರ ಜಯಂತಿ.
ಈ ಎರಡೂ ಹಬ್ಬಕ್ಕೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷವಾಗಿ ಶುಭ ಕೋರಿದ್ದಾರೆ. ದಯವಿಲ್ಲದ ಧರ್ಮವಿಲ್ಲ.ಕಾಯಕವೇ ಕೈಲಾಸ. ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುರಕ್ಷಿತವಾಗಿರಿ ಎಂದು ದರ್ಶನ್ ಎರಡೂ ಹಬ್ಬಗಳಿಗೂ ಜೊತೆಯಾಗಿ ವಿಶ್ ಮಾಡಿದ್ದಾರೆ.
ಸದ್ಯಕ್ಕೆ ಲಾಕ್ ಆಗಿರುವುದರಿಂದ ಚಿತ್ರೀಕರಣವಿಲ್ಲದೇ ದರ್ಶನ್ ತಮ್ಮ ಮೈಸೂರಿನ ತೋಟದ ಮನೆಯಲ್ಲಿ ಗೆಳೆಯರೊಂದಿಗೆ ಖುಷಿಯಾಗಿ ಪ್ರಾಣಿ-ಪಕ್ಷಿಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ.