ಬೆಂಗಳೂರು: ಕೊರೋನಾಗೆ ಲಸಿಕೆ ಪಡೆದುಕೊಂಡ ವಿಡಿಯೋ ಹಾಕಿ ಸ್ಯಾಂಡಲ್ ವುಡ್ ರಿಯಲ್ ಜೋಡಿ ದಿಗಂತ್-ಐಂದ್ರಿತಾ ರೇ ಪೇಚಿಗೆ ಸಿಲುಕಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದಿಗ್ಗ-ಆಂಡಿ ಜೋಡಿ ಲಸಿಕೆ ಪಡೆದುಕೊಂಡು ಕೊರೋನಾದಿಂದ ಸುರಕ್ಷಿತವಾಗಿರಿ. ನಾವು ಲಸಿಕೆ ಪಡೆದುಕೊಂಡಿದ್ದೇವೆ. ಇದು ಸಂಪೂರ್ಣ ಸುರಕ್ಷಿತ ಎಂದು ಸಲಹೆ ನೀಡಿದ್ದರು.
ಆದರೆ ಅವರು ವಿಡಿಯೋ ಹಾಕುತ್ತಿದ್ದಂತೆ ನೆಟ್ಟಿಗರು ಸರ್ಕಾರ ಇಂದಿನಿಂದ 18-44 ವಯೋಮಾನದವರಿಗೆ ಲಸಿಕೆ ಸ್ಥಗಿತಗೊಳಿಸಿದೆ. ಹಾಗಿದ್ದರೆ ನಿಮಗೆ ಮಾತ್ರ ಹೇಗೆ ಸಿಕ್ಕಿತು? ಎಂದು ಪ್ರಶ್ನಿಸಿದ್ದಾರೆ. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಐಂದ್ರಿತಾ ಪ್ರತಿಕ್ರಿಯೆ ನೀಡಿದ್ದು, ನಾವು ನಮ್ಮ ಊರಿನಲ್ಲಿ ಒಂದು ವಾರ ಮೊದಲೇ ನೋಂದಣಿ ಮಾಡಿಸಿಕೊಂಡಿದ್ದೆವು. ನಮ್ಮ ಊರಿನಲ್ಲಿ ಕಡಿಮೆ ಜನ ಇರುವ ಕಾರಣ ಬಹುಶಃ ನಮಗೆ ಕೊಟ್ಟಿರಬೇಕು ಎಂದು ಸಮಜಾಯಿಷಿ ಕೊಟ್ಟಿದ್ದಾರೆ.