Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ವತಿಯಿಂದ ಬಡವರು, ಪೊಲೀಸರಿಗೆ ಊಟದ ವ್ಯವಸ್ಥೆ

ಕಿಚ್ಚ ಸುದೀಪ್ ವತಿಯಿಂದ ಬಡವರು, ಪೊಲೀಸರಿಗೆ ಊಟದ ವ್ಯವಸ್ಥೆ
ಬೆಂಗಳೂರು , ಗುರುವಾರ, 13 ಮೇ 2021 (09:37 IST)
ಬೆಂಗಳೂರು: ಕೊರೋನಾ ಸಂಕಷ್ಟ ಕಾಲದಲ್ಲಿ ಕಿಚ್ಚ ಸುದೀಪ್ ತಮ್ಮ ತಂಡದ ಜೊತೆಗೂಡಿಕೊಂಡು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.


ಮೊನ್ನೆಯಷ್ಟೇ 300 ಆಕ್ಸಿಜನ್ ಸಿಲಿಂಡರ್ ಒದಗಿಸಿದ್ದ ಸುದೀಪ್ ಈಗ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ.

ಬೆಂಗಳೂರಿನ ವಿವಿಧೆಡೆ ಊಟವಿಲ್ಲದೇ ಪರದಾಡುತ್ತಿರುವ ಬಡವರು, ಕೊರೋನಾ ಕಾಲದಲ್ಲಿ ಕಾನೂನು ಪಾಲನೆ ಮಾಡಲು ಕರ್ತವ್ಯ ನಿಭಾಯಿಸುತ್ತಿರುವ ಪೊಲೀಸರಿಗೆ ಕಿಚ್ಚನ ತಂಡ ಊಟ ಒದಗಿಸುತ್ತಿದೆ. ರಾಜರಾಜೇಶ್ವರಿ ನಗರ, ಕೆಆರ್ ಮಾರ್ಕೆಟ್, ಮೈಸೂರ್ ರಸ್ತೆ, ಅತ್ತಿಗುಪ್ಪೆ ಸೇರಿದಂತೆ ಹಲವೆಡೆ ಕಿಚ್ಚನ ಹುಡುಗರು ಆಹಾರ ವಿತರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಸಂಕಷ್ಟದಲ್ಲಿ ಫೀಲ್ಡಿಗಿಳಿದಿರುವ ನಟ-ನಟಿಯರು