Select Your Language

Notifications

webdunia
webdunia
webdunia
webdunia

ವಂಚಕನ ಕೈಯಲ್ಲಿ ಸಿಕ್ಕಿಹಾಕಿದ್ದ ಕೋಟಿಗೊಬ್ಬ 3 ಸಿನಿಮಾ ತಂಡಕ್ಕೆ ನೆರವಾದ ನಟ ಜಗ್ಗೇಶ್

ಜಗ್ಗೇಶ್
ಬೆಂಗಳೂರು , ಶುಕ್ರವಾರ, 18 ಅಕ್ಟೋಬರ್ 2019 (09:29 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಶೂಟಿಂಗ್ ಗಾಗಿ ಪೊಲ್ಯಾಂಡ್ ಗೆ ತೆರಳಿದ್ದ ತಂಡಕ್ಕೆ ಅಲ್ಲಿನ ಶೂಟಿಂಗ್ ಏಜೆಂಟ್ ಗಳು ನಡೆಸಿದ ವಂಚನೆಯಿಂದಾಗಿ ಭಾರತಕ್ಕೆ ಬರಲಾಗದೇ ಒದ್ದಾಡಿದ್ದರು.


95 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಶೂಟಿಂಗ್ ಏಜೆನ್ಸಿ ಕಂಪನಿ ಮಾಲಿಕ ಸಂಜಯ್ ಪಾಲ್ ಎಂಬಾತ ನಿರ್ಮಾಪಕ ಸೂರಪ್ಪ ಬಾಬು ಸಹಾಯಕರೊಬ್ಬರ ಪಾಸ್ ಪೋರ್ಟ್ ಕಿತ್ತುಕೊಂಡು ಭಾರತಕ್ಕೆ ಬರಲಾಗದಂತೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದ.

ಈ ಸಂಬಂಧ ತಮ್ಮ ಸಹಾಯಕನನ್ನು ಭಾರತಕ್ಕೆ ಕರೆತರಲು ನಿರ್ಮಾಪಕ ಸೂರಪ್ಪ ಬಾಬು ನಟ, ಬಿಜೆಪಿ ನಾಯಕ ಜಗ್ಗೇಶ್ ರನ್ನು ಕೋರಿದ್ದಾರೆ. ಜಗ್ಗೇಶ್ ತಮಗೆ ಆಪ್ತರಾದ ಕೇಂದ್ರ ಸಚಿವ ಸದಾನಂದ ಗೌಡರನ್ನು ಸಂಪರ್ಕಿಸಿದ್ದಾರೆ. ಕೇಂದ್ರ ಸಚಿವ ಕರೆ ಬರುತ್ತಿದ್ದಂತೇ ಅಲರ್ಟ್ ಆದ ಮುಂಬೈ ಪೊಲೀಸರು ಖದೀಮನ ವಿರುದ್ಧ ಕೇಸ್ ಜಡಿದು ಸೂರಪ್ಪ ಬಾಬು ಸಹಾಯಕನನ್ನು ಭಾರತಕ್ಕೆ ಕರೆತರಲು ಸಹಾಯ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್ ಚಿತ್ರರಂಗದ ನನ್ನ ಬಾಂಧವರಿಗೆ ಕಷ್ಟ ಬಂದರೆ ಹೆಗಲುಕೊಡುವುದು ನನ್ನ ಕರ್ತವ್ಯ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ 2 ಶೂಟಿಂಗ್ ಲೇಟ್ ಆಗಿದ್ದು ಯಾಕೆ ಗೊತ್ತಾ?