Select Your Language

Notifications

webdunia
webdunia
webdunia
webdunia

ರಜನಿ ಪುತ್ರಿ ಬಳಿಕ, ಚಿರಂಜೀವಿ ಪುತ್ರಿಯ ಬಾಳಲ್ಲೂ ಬಿರುಗಾಳಿ?!

webdunia
ಹೈದರಾಬಾದ್ , ಬುಧವಾರ, 19 ಜನವರಿ 2022 (10:10 IST)
ಹೈದರಾಬಾದ್: ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಐಶ್ವರ್ಯಾ-ನಟ ಧನುಷ್ ವಿಚ್ಛೇದನ ಸುದ್ದಿ ಭಾರೀ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಚಿರಂಜೀವಿ ಸರ್ಜಾ ಪುತ್ರಿ ಶ್ರೀಜಾ ಜೀವನದಲ್ಲೂ ಸುದ್ದಿಯೊಂದು ಹರಿದಾಡುತ್ತಿದೆ.

ಶ್ರೀಜಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪತಿ ಕಲ್ಯಾಣ್ ದೇವ್ ಹೆಸರು ಕೈ ಬಿಟ್ಟಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಸ್ಟಾರ್ ದಂಪತಿಗಳ ನಡುವಿನ ಬಿರುಕು ಬಹಿರಂಗವಾಗುವುದೇ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಇಂತಹ ಕೆಲಸಗಳಿಂದಲೇ.

ಈಗ ಶ್ರೀಜಾ-ಕಲ್ಯಾಣ್ ಬದುಕಿನಲ್ಲೂ ಏನೋ ನಡೆದಿದೆ ಎಂಬ ಸುದ್ದಿ ಹರಡಲೂ ಇದೇ ಕಾರಣವಾಗಿದೆ. 2016 ರಲ್ಲಿ ಮದುವೆಯಾದ ಜೋಡಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಆದರೆ ಈಗ ತಮ್ಮ ಹೆಸರಿನ ಮುಂದೆ ಕಲ್ಯಾಣ್ ಹೆಸರು ಕೈಬಿಟ್ಟಿದ್ದಲ್ಲದೆ, ಅನ್ ಫಾಲೋ ಕೂಡಾ ಮಾಡಿರುವುದು ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಗಳಿಗೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಮಠ’ ಜಾಗದಲ್ಲೇ ರಾಘವೇಂದ್ರಸ್ಟೋರ್ಸ್ ಚಿತ್ರೀಕರಣ: ಹಳೆಯ ನೆನಪಿಗೆ ಜಾರಿದ ಜಗ್ಗೇಶ್