Hritik Roshan: ಬೆಳೆದ ಮೇಲೆ ಕನ್ನಡಿಗರು ಕಾಣಲ್ವಾ: ಹೊಂಬಾಳೆ ಫಿಲಂಸ್ ವಿರುದ್ಧ ಕನ್ನಡಿಗರ ಕಿಡಿ

Krishnaveni K
ಗುರುವಾರ, 29 ಮೇ 2025 (09:31 IST)
Photo Credit: X
ಬೆಂಗಳೂರು: ಕನ್ನಡದ ಶ್ರೀಮಂತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿನ್ನೆ ಬಾಲಿವುಡ್ ತಾರೆ ಹೃತಿಕ್ ರೋಷನ್ ಅವರ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡಿತ್ತು. ಇದಕ್ಕೆ ಕನ್ನಡಿಗರು ಕಿಡಿ ಕಾರಿದ್ದು ನಿಮಗೆ ಬೆಳೆದ ಮೇಲೆ ಕನ್ನಡ ನಟರು ಕಾಣಲ್ವಾ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಮುಂದಿನ ಸಿನಿಮಾ ಹೃತಿಕ್ ರೋಷನ್ ಜೊತೆಗೆ ಎಂದು ಹೊಂಬಾಳೆ ಫಿಲಂಸ್ ಘೋಷಿಸುತ್ತಿದ್ದಂತೇ ಹಲವಾರು ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಬಂದಿದೆ. ಬೆಳೆಯುವವರೆಗೂ ನಿಮಗೆ ಕನ್ನಡ ಬೇಕು. ಬೆಳೆದ ಮೇಲೆ ಕನ್ನಡ ನಟರು ಕಾಣೋದಿಲ್ವಾ? ಎಂದು ಕಿಡಿ ಕಾರಿದ್ದಾರೆ.

ಕೆಜಿಎಫ್ ಸಿನಿಮಾ ಹಿಟ್ ಆದ ಬಳಿಕ ಹೊಂಬಾಳೆ ಫಿಲಂಸ್ ಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಇದಾದ ಬಳಿಕ ಹೊಂಬಾಳೆ ಫಿಲಂಸ್ ಸಲಾರ್ ಸಿನಿಮಾ ಮಾಡಿತ್ತು. ಇದೂ ಕೂಡಾ ತೆಲುಗು ನಟ ಪ್ರಭಾಸ್ ಜೊತೆಗೆ. ಇನ್ನೊಂದು ಸಿನಿಮಾ ಕೀರ್ತಿ ಸುರೇಶ್ ಜೊತೆಗೆ ಮಾಡಿತ್ತು. ಈಗಾಗಲೇ ಮಲಯಾಳಂ ನಟ ಪೃಥ್ವಿರಾಜ್ ನಾಯಕರಾಗಿ ಒಂದು ಸಿನಿಮಾ ಘೋಷಿಸಿದೆ. ಒಟ್ಟಿನಲ್ಲಿ ಎಲ್ಲವೂ ಪರಭಾಷಾ ಸ್ಟಾರ್ ಗಳನ್ನಿಟ್ಟುಕೊಂಡೇ.

ಇದೇ ಕಾರಣಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಕನ್ನಡದಲ್ಲಿ ಸುದೀಪ್, ಯಶ್, ದರ್ಶನ್, ಧ್ರುವ ಸರ್ಜಾರಂತಹ ಹೀರೋಗಳಿದ್ದಾರೆ. ಅವರು ಬೇಡ ಎಂದರೆ ಇತ್ತೀಚೆಗೆ ಬಂದ ವಿರಾಟ್ ನಂತಹ ಯುವ ಭರವಸೆಯ ನಟರಿದ್ದಾರೆ. ಅವರನ್ನು ಬೆಳೆಸುವ ಪ್ರಯತ್ನ ಮಾಡಬಹುದಲ್ವೇ? ಯಾಕೆ ಯಾವಾಗಲೂ ಪರಭಾಷಾ ನಟರನ್ನೇ ಹಾಕಿ ಸಿನಿಮಾ ಮಾಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments