ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ತಮಮ್ಮಾ ಭಾಟಿಯಾ ಅವರಿಗೆ 6ಕೋಟಿ ಸಂಭಾವನೆ ನೀಡಿರುವ ವಿವಾದ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ನಲ್ಲಿ ಉತ್ಪನ್ನಗಳ ಪ್ರಮೋಷನ್‌ಗೆ ರಾಯಭಾರಿಗಳನ್ನು ನೇಮಿಸುವುದು ಹಳೆಯ ಸಂಪ್ರದಾಯ. ಇದರಿಂದ ತೆರಿಗೆ ಪಾವತಿದಾರರ ಹಣ ವ್ಯರ್ಥಮಾಡಿದಂತಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಒಂದು ಉತ್ಪನ್ನಕ್ಕೆ ಜನ ಗ್ರಾಹಕರಾಗಲು, ಆ ಉತ್ಪನ್ನ ಉತ್ತಮವಾಗಿರಬೇಕು. ನಮ್ಮ ಮೈಸೂರು ಸ್ಯಾಂಡಲ್ ಸೋಪ್ ಉತ್ತಮ ಉತ್ಪನ್ನವಷ್ಟೇ ಅಲ್ಲದೆ, ಅದು ನಮ್ಮ ಪರಂಪರೆಯಾಗಿದೆ. ಈ ಸೋಪನ್ನು ಬಳಸಿದ ಪ್ರತಿಯೊಬ್ಬನು ರಾಯಭಾರಿನೇ. ಪ್ರತಿಯೊಬ್ಬ ಕನ್ನಡಿಗನು ಅದರ ರಾಯಭಾರಿಯಾಗಿದ್ದು, ಅದನ್ನು ಪ್ರತಿಯೊಬ್ಬ ಕನ್ನಡಿಗನು ಉಚಿತವಾಗಿ ಜಗತ್ತಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡುತ್ತಾನೆ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪಿ.ಎಸ್. ಆಪಲ್ ಒಂದು ಯಶಸ್ವಿ ಬ್ರ್ಯಾಂಡ್, ಅದು ಬ್ರಾಂಡ್ ಅಂಬಾಸಿಡರ್‌ನ್ನು ಹೊಂದಿಲ್ಲ. ರಾಯಭಾರಿಗಾಗಿ ಆ ಕಂಪನಿ ಹಣ ವ್ಯಯಿಸುವುದಿಲ್ಲ. ಇನ್ನೂ ನಾನು ಕಂಡಂತೆ ಡವ್ ಸೋಪ್‌ನದ್ದು ಅತ್ಯುತ್ತಮ ಅಭಿಯಾನಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ.
ಈಚೆಗೆ ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವುದು ಕನ್ನಡ ಪರ ಸಂಘಟನೆಗಳ ಹಾಗೂ ಕನ್ನಡ ನಟಿಯರ ಆಕ್ರೋಶಕ್ಕೆ ಕಾರಣವಾಗಿದೆ.