Publish Date: Fri, 11 Sep 2020 (09:12 IST)
Updated Date: Fri, 11 Sep 2020 (09:15 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಬಾಯ್ಬಿಡಿಸಲು ಸಿಸಿಬಿ ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ಅವರಿಬ್ಬರೂ ಬಾಯ್ಬಿಡುತ್ತಿಲ್ಲ.
ಇದಕ್ಕೆ ಕಾರಣವೇನು ಗೊತ್ತಾ? ಕೆಲವು ಮೂಲಗಳ ಪ್ರಕಾರ ಇಬ್ಬರೂ ನಟಿಯರಿಗೂ ‘ಪ್ರಭಾವಿ’ಗಳ ಬೆಂಬಲವಿದೆ. ಅವರಿಗೆ ಪ್ರಕರಣವನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಪ್ರಭಾವಿಗಳೇ ಸೂಚನೆ ನೀಡಿದ್ದಾರೆ. ಅದರಂತೆ ಸಿಸಿಬಿ ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಒಂದೇ ರಾಗ ಎಳೆಯುತ್ತಿದ್ದಾರೆ. ಇದರಿಂದಾಗಿ ಇವರ ಬಾಯ್ಬಿಡಿಸಲು ಆರೋಪದ ಬಗ್ಗೆ ಸಾಕ್ಷ್ಯ ಸಂಗ್ರಹಿಸಲು ಪೊಲೀಸರಿಗೆ ಸಾಕು ಸಾಕಾಗುತ್ತಿದೆ.