ಮುಂಬೈ: ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪಾಲ್ಗೊಂಡಿದ್ದಾರೆ. ಈ ಶೋನಲ್ಲಿ ರಿಷಬ್ ಶೆಟ್ಟಿ ಎಷ್ಟು ಹಣ ಗೆದ್ದರು ಮತ್ತು ಇದನ್ನು ಯಾರಿಗೆ ಕೊಡುತ್ತಿದ್ದಾರೆ ಇಲ್ಲಿದೆ ವಿವರ.
ಸೋನಿ ಚಾನೆಲ್ ನಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದು ನಿನ್ನೆ ಈ ಎಪಿಸೋಡ್ ಪ್ರಸಾರವಾಗಿದೆ. ಈ ಶೋನಲ್ಲಿ ರಿಷಬ್ ಬರುತ್ತಿದ್ದಂತೇ ಶಿಳ್ಳೆ, ಚಪ್ಪಾಳೆಗೊಳೊಂದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ರಿಷಬ್ ಕೆಬಿಸಿಯಲ್ಲಿ ತಮ್ಮ ಫೌಂಡೇಷನ್ ಗಾಗಿ ಆಡಿದ್ದಾರೆ. ಈ ಶೋನಲ್ಲಿ ಗೆದ್ದ ಹಣವನ್ನು ದೈವ ನರ್ತಕರ ಕ್ಷೇಮಾಭಿವೃದ್ಧಿಗೆ ಬಳಸುವುದಾಗಿ ಅವರು ಮೊದಲೇ ಹೇಳಿದ್ದರು. ವಿಶೇಷ ಕಾರಣಕ್ಕಾಗಿ ಆಡುವ ಕಾರಣ ಅವರಿಗೆ ಐದನೇ ಪ್ರಶ್ನೆಯಿಂದ ಆರಂಭವಾಗಿತ್ತು.
ರಿಷಬ್ ಶೋನಲ್ಲಿ ಒಟ್ಟು 12 ಪ್ರಶ್ನೆಗಳನ್ನು ಎದುರಿಸಿದರು. ಈ ವೇಳೆ ಅವರು ಒಟ್ಟು 12,50,000 ರೂ. ಗೆದ್ದರು. ಬಳಿಕ ಸಮಯ ಮುಗಿಯಿತು. ಹೀಗಾಗಿ ಅಷ್ಟು ಹಣ ಮಾತ್ರ ರಿಷಬ್ ಖಾತೆಗೆ ಬಂತು. ಹಣದ ಜೊತೆಗೆ ರಿಷಬ್ ಫೌಂಡೇಷನ್ ಗೆ ಹೀರೋ ಎಕ್ಸ್ ಟ್ರೀಮ್ 125 ಬೈಕ್ ಕೂಡಾ ಗೆದ್ದಿದ್ದಾರೆ.